ಮುಖಪುಟ


Follow us on Youtube

ಅಂಗವಿಕಲ ನೌಕರರಿಗೆ ಕೊರೋನ ವೈರಾಣು ಪರಿಸ್ಥಿತಿಯ ಹಿನ್ನಲೆಯಲ್ಲಿ ವಿನಾಯಿತಿ ಘೋಷಿಸಿರುವ ಕೇಂದ್ರ ಸರ್ಕಾರದ ಆದೇಶ

ಮಾನ್ಯರೇ,
ಕಛೇರಿಯ ಮುಖ್ಯಸ್ಥರಿಗೆ ವಿನಾಯಿತಿ ಕೋರಿ ಸಲ್ಲಿಸುವ ಮನವಿ ಪತ್ರದೊಡನೆ ಈ ಕೆಳಗಿನ ಕೊಂಡಿಯಲ್ಲಿರುವ ಕೇಂದ್ರ ಸರ್ಕಾರದ ಆದೇಶದ ಪ್ರತಿಯನ್ನು ಲಗತ್ತಿಸಿ ನೀಡುವುದರೊಂದಿಗೆ ಬಿಗಡಾಯಿಸಿರುವ ಕೊರೋನ ವೈರಾಣು ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದುಕೊಳ್ಳಿರಿ.
Preventive measures to contain the spread of COVID19 – Guidelines for protection and safety of divyangjan employees
ಅಂಗವಿಕಲ ನೌಕರರಿಗೆ ವೇತನ ಸಹಿತ ಅನಾರೋಗ್ಯ ರಜೆಯನ್ನು ನೀಡುವ ಬಗ್ಗೆ officememorandum-28-04-2020
Comorbidities exemption from roster

ಈ ಕೆಳಗಿನ ಸುತ್ತೋಲೆಯು 30/03/2020ರಿಂದ ೧೪/೦೪/೨೦೨೦ರವರೆಗೆ ಅಗತ್ಯ ಸೇವೆಯಡಿ ರಾಜ್ಯ ಸರ್ಕಾರವು ಗುರುತಿಸಿರುವ ಇಲಾಖೆಗಳ ಅಂಧ ನೌಕರರಿಗೆ ಅನ್ವೈಸುವುದು.

state govt circular for essential dept blind employees

ಮಾನ್ಯರೇ,
ಕೊರೋನ ವೈರಾಣು ಸಾಂಕ್ರಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಿನಾಯಿತಿ ಕೋರಿ ಸಲ್ಲಿಸುವ ಮಾದರಿ ಪತ್ರವನ್ನು ಇಲ್ಲಿ ಹಾಕಲಾಗಿದೆ. ಈ ಪತ್ರವು ಮಾದರಿ ಸ್ವರೂಪದ್ದಾಗಿದ್ದು, ಕಛೇರಿಗೆ ಸಲ್ಲಿಸುವಾಗ ಪತ್ರವನ್ನು ಅಗತ್ಯದನುಸಾರ ಮಾರ್ಪಾಟುಗೊಳಿಸಿಕೊಂಡು ಕೇಂದ್ರ-ನಮ್ಮ ರಾಜ್ಯ ಸರ್ಕಾರಗಳು ಹೊರಡಿಸಿದ ಸುತ್ತೋಲೆಗಳೊಂದಿಗೆ ಸಲ್ಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುವುದು.
ಹಾಗೆಯೇ, ಈ ಮಾದರಿ ಪತ್ರವನ್ನು ಸಿದ್ಧಪಡಿಸಿ ಸಂಘಕ್ಕೆ ನೀಡಿದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್‌ ಬಿ.ಸಿ, ರಾಘವೇಂದ್ರ ಜನಿವಾರ್‌ ಮತ್ತು ಉಮೇಶ್‌ ಇವರೆಲ್ಲರಿಗೂ ಸಂಘವು ಸದಸ್ಯರೆಲ್ಲರ ಪರವಾಗಿ ಧನ್ಯವಾದವನ್ನು ಸಲ್ಲಿಸುವುದು.
ಕೊರೋನ ವೈರಾಣು ಹಿನ್ನೆಲೆಯಲ್ಲಿ ರಜೆ ವಿನಾಯಿತಿ ಮಾದರಿ ಪತ್ರ

ತಾಂತ್ರಿಕ ಜ್ಞಾನ ಮತ್ತು ಕೌಶಲ್ಯ ಸಂವರ್ಧನೆಗಾಗಿ ಪ್ರಾಥಮಿಕ ಸಮೀಕ್ಷೆ

ಪ್ರಿಯ ಸದಸ್ಯರೇ,
KSGEAB ಸಂಘದ ಕೌಶಲ್ಯ ಸಂವರ್ಧನಾ ಮತ್ತು ತಾಂತ್ರಿಕ ಸಮಿತಿಯು ಅಂಧ ನೌಕರರಲ್ಲಿರುವ ತಾಂತ್ರಿಕ ಜ್ಞಾನ ಮತ್ತು ಅಂತರ್ಗತಗೊಂಡಿರುವ ಕೌಶಲ್ಯವನ್ನು ಅರಿತುಕೊಳ್ಳುವುದಕ್ಕಾಗಿ ಮತ್ತು ಅಂಧ ನೌಕರರಿಗೆ ಅಗತ್ಯವಿರುವ ತಾಂತ್ರಿಕ ಜ್ಞಾನವನ್ನು ಮತ್ತು ಕಾರ್ಯಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯವನ್ನು ಅರಿತುಕೊಳ್ಳಲು ಈ ಸಮೀಕ್ಷೆಯನ್ನು ಕೈಗೊಂಡಿದೆ.
ತಾವೆಲ್ಲರು ಈ ಕೆಳಗಿನ ನಮೂನೆಯನ್ನು ಭರ್ತಿಗೊಳಿಸಬೇಕಾಗಿ ವಿನಂತಿ.
ತಾಂತ್ರಿಕ ಜ್ಞಾನ ಮತ್ತು ಕೌಶಲ್ಯ ಸಂವರ್ಧನೆಗಾಗಿ ಪ್ರಾಥಮಿಕ ಸಮೀಕ್ಷಾ ನಮೂನೆ