ಅಂಧ ಮಹಿಳಾ ನೌಕರರ ಔದ್ಯೋಗಿಕ ಮತ್ತು ಸಾಮಾಜಿಕ ಪರಿಸ್ಥಿತಿ

ಕುರಿತು ಪ್ರಾಥಮಿಕ ಸಮೀಕ್ಷೆ

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ (ರಿ) ಬೆಂಗಳೂರು

ಸ್ವಾಭಿಮಾನ ಸಮಾನತೆ ಸ್ವಗೌರವ

#41/ಬಿ, ಬಿ ಬ್ಲಾಕ್, ರೈನ್ಬೋ ಲೇಔಟ್, ವಡೇರಹಳ್ಳಿ, ವಿದ್ಯಾರಣ್ಯಪುರ ಅಂಚೆ,

ಬೆಂಗಳೂರು ಉತ್ತರ-560097

ನೋಂದಣಿ ಸಂಖ್ಯೆ: ಡಿ.ಆರ್.ಬಿ-1/ಎಸ್.ಒ.ಆರ್./216/2018-18 ಬೆಂಗಳೂರು, ದಿನಾಂಕ: 21-07-2017

Website: www.ksgeab.org/ E-mail: ksgeab.kar@gmail.com

 

 


 

ಅಂಧ ಮಹಿಳಾ ನೌಕರರ ಔದ್ಯೋಗಿಕ ಮತ್ತು ಸಾಮಾಜಿಕ ಪರಿಸ್ಥಿತಿ ಕುರಿತು ಪ್ರಾಥಮಿಕ ಸಮೀಕ್ಷೆ

 

"ಅರಕೆ ಎಂಬುದು ಅಂತ್ಯ ಮುಟ್ಟದ

ಅಮರ ಸತ್ಯದ ದಾರಿ ಸೇರದ

ಕರಡು ಎಲ್ಲೆಯ ಒಳಗೆ ಸಿಲುಕದ ಯತ್ನ ನಮೂನೆಯದು

ಅರಿತು ನೋಡಿದರೆ ಬೇರೆ ಕಾಣುವ

ಕುರಿತು ಬರೆದರೆ ತಿರುವು ನಿಲುವಿಗೆ

ಬೆರಗ ತಿಳಿಯಲು, ಲೋಕ ಬುದ್ಧಿಗೆ ಬೇಕು ನಮೂನೆ"

 

ಕೃತಜ್ಞತೆ:

ಕರ್ನಾಟಕ ರಾಜ್ಯಸರ್ಕಾರಿ ಅಂಧ ನೌಕರರ ಸಂಘಟನೆಯು ಅಂಧ ಮಹಿಳಾ ನೌಕರರ ಸಮಸ್ಯೆಗಳನ್ನು ಮತ್ತು ಅವಶ್ಯಕತೆಗಳನ್ನು ಅರಿತು ಮೂಲಕ ಸರ್ವತೋಮುಕ ಪ್ರಗತಿ ಸಾಧಿಸಲು ಮಹಿಳಾ ಆಧ್ಯತಾ" ಸಮಿತಿಯನ್ನು ದಿನಾಂಕ: 10/06/2018 ರಂದು ರಚಿಸಿರುತ್ತದೆ.

ಸದರಿ ಸಮಿತಿಯು ಕಾರ್ಯವನ್ನು ಆರಂಭಿಸಿ ಪ್ರಾಥಮಿಕ ಸಮಿಕ್ಷೆಯನ್ನು ಕೈಗೊಂಡು ಯಶಸ್ವಿಯಾಗಿ ನೆರವೇರಿಸಿರುತ್ತದೆ.

ಸದಾವಕಾಶವನ್ನು ನೀಡಿದ ಸಂಘಟನೆಗೆ ಎಲ್ಲಾ ಅಂಧ ಮಹಿಳಾ ನೌಕರರ ಪರವಾಗಿ ಸಮಿತಿಯು ಕೃತಜ್ಞತೆಯನ್ನು ಸಲ್ಲಿಸುತ್ತದೆ.

ಸಮಿಕ್ಷೆಯ ಜೀವಾಳವು ಮಾಹಿತಿಯೇ ಆಗಿರುವುದರಿಂದ, ಮಾಹಿತಿಯ ಸಂಗ್ರಹಣೆಗೆ ಸ್ವಯಂ ಸೇವಕರ ನೆರವನ್ನು "ಅಮೃತಬಿಂದು" ಎಂಬ ಸಂಸ್ಥೆಯು ಒದಗಿಸಿರುತ್ತದೆ. ಸಂಸ್ಥೆಯ ರೂವಾರಿಗಳಾದ ಶ್ರೀಮತಿ ಅಕ್ಷತಾ ರವರಿಗೆ ಹಾಗೂ ಸ್ವಯಂಸೇವಕರಾಗಿ ಸದರಿ ಕಾರ್ಯಕ್ಕೆ ನೆರವಾದ ಕುಮಾರಿ ನವ್ಯಾಶ್ರೀ, ಶ್ರೀಮತಿ ಶೃತಿ ಬಿ, ಕುಮಾರಿ ಶ್ವೇತ ಎಸ್ ಹಾಗೂ ಕುಮಾರಿ ಲಲಿತಾ ರವರಿಗೂ ಸಂಘದ ಪರವಾಗಿ ಸದರಿ ಸಮಿತಿಯು ಕೃತಜ್ಞತೆಯನ್ನು ಸಲ್ಲಿಸುತ್ತಿದೆ.

ಅಂದತ್ವದ ಕುರಿತು ಮಾಹಿತಿ ಒದಗಿಸಿದ ಡಾ. ಶ್ರೀಮತಿ ರಂಜಿತಾರವರಿಗೂ ಕೂಡ ಕೃತಜ್ಞತೆಯನ್ನು ಸಲ್ಲಿಸಲು ಹರ್ಷವೆನಿಸಿದೆ.

ಹಾಗೆಯೇ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಮ್ಮ ಎಲ್ಲಾ ಕಾರ್ಯಗಳಲ್ಲಿ ಸಹಾಯ ಸಹಕಾರ ನೀಡುತ್ತಿರುವ ಸ್ವಯಂಸೇವಕರು ಹಾಗು ಸಮಸ್ತ ಸದಸ್ಯರಿಗೂ ಸಮಿತಿಯು ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಮರ್ಪಿಸುತ್ತದೆ.

 

ಸಮಿಕ್ಷೆಯ ಅವಧಿ: 01/12/2018-010/02/2019.

 

ಸಲ್ಲಿಕೆಯ ದಿನಾಂಕ: 17/03/2019.

*****************


 

ಪರಿವಿಡಿ

ಅಧ್ಯಾಯ-1

1.1. ಪ್ರಸ್ತಾವನೆ

1.2. ಉದ್ದೇಶಗಳು

1.3. ವ್ಯಾಪ್ತಿ

1.4. ಮಾಹಿತಿ ಸಂಗ್ರಹಣೆಯ ಮಾಧ್ಯಮ

1.5. ಸಮೀಕ್ಷೆಯ ಮಿತಿಗಳು

 

ಅಧ್ಯಾಯ-2. ವಿಶ್ಲೇಷಣೆ.

2.1 ಸಮಿಕ್ಷೆಯ ಪ್ರಶ್ನಾವಳಿ

2.2. ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳ ವಿಶ್ಲೇಷಣೆ

2.3. ವಿವರಣಾತ್ಮಕ ಪ್ರಶ್ನೋತ್ತರಗಳ ವಿಶ್ಲೇಷಣೆ

 

ಅಧ್ಯಾಯ-3. ಶಿಫಾರಸ್ಸು ಮತ್ತು ಉಪಸಂಹಾರ.

3.1. ಶಿಫಾರಸ್ಸುಗಳು

3.2. ಉಪಸಂಹಾರ

*******************


ಅಧ್ಯಾಯ-1.

1.1. ಪ್ರಸ್ತಾವನೆ:

"ಸ್ವಾಭಿಮಾನ ಸಮಾನತೆ ಸ್ವಗೌರವ" ಧ್ಯೇಯದಂತೆ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಸಂವಿಧಾನದಲ್ಲಿ ಉಲ್ಲೇಖಿಸಲಾದ ಉಪಸಮಿತಿಗಳ ರಚನೆಯ ನಿಯಮದಂತೆ ಮಹಿಳೆಯರಿಗೆ ಸಂಬಂಧಿಸಿದಂತೆ ಮಹಿಳಾ ಆಧ್ಯತಾ ಸಮೀತಿ" ಎಂಬ ವಿಶೇಷ ಸಮಿತಿಯನ್ನು ಸದರಿ ಸಂಘವು ರಚಿಸಿರುತ್ತದೆ. ಸಮಿತಿಯಲ್ಲಿ ಒಟ್ಟು ಏಳು ಸದಸ್ಯರಿದ್ದು ಅವರ ವಿವರ ಕೆಳಗಿನಂತಿವೆ.

ಮಹಿಳಾ ಆಧ್ಯತಾ ಸಮಿತಿಯ ಸದಸ್ಯರು:

ಕ್ರ.ಸಂ

ಹೆಸರು

ವಿಭಾಗ

ಹುದ್ದೆ ಮತ್ತು ಕಾರ್ಯ ಸ್ಥಳ

1

ನಾಗಮಣಿ

ಕಾರ್ಯಕಾರಿ ಪದಾಧಿಕಾರಿ

ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆ, ಕೂಡ್ಲಾ, ಸೇಡಂ ತಾಲ್ಲೂಕು, ಕಲ್ಬುರ್ಗಿ ಜಿಲ್ಲೆ

2

ನೇತ್ರಾವತಿ

ಸಂಸ್ಥಾಪಕ ಸದಸ್ಯರು

ಪ್ರಥಮ ದರ್ಜೆ ಸಹಾಯಕರು, ನಗರ ಸಿವಿಲ್ ನ್ಯಾಯಾಲಯಗಳ ಸಮುಚ್ಚಯ ಬೆಂಗಳೂರು.

3

ಚಂಪಕಮಾಲ

ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ

ಪ್ರಥಮ ದರ್ಜೆ ಸಹಾಯಕರು, ಖಜಾನೆ ಇಲಾಖೆ, ಬಳ್ಳಾರಿ ಜಿಲ್ಲೆ.

 

4

ಚನ್ನಮ್ಮ ಈರಪ್ಪ ಮಾರಿಹಾಳ

ಸದಸ್ಯರು

 

ದ್ವಿತೀಯ ದರ್ಜೆ ಸಹಾಯಕರು, ಗ್ರಾ.ಪಂ ಕಾರ್ಯಲಯ, ನಿಚ್ಚಗೆರೆ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ.

5

ಮುಬಿನ ಬಾನು

ಸದಸ್ಯರು

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ನವಿಲೂರು ಗ್ರಾ.ಪಂ. ಚಾಮರಾಜನಗರ ಜಿಲ್ಲೆ.

 

6

ಅಶ್ವಿನಿ ನರಸು ಮಾಳಿ

 

ಸದಸ್ಯರು

 

ಪ್ರಥಮ ದರ್ಜೆ ಸಹಾಯಕರು, CJMFC ಕೋರ್ಟ್, ರಾಯಬಾಗ, ಬೆಳಗಾವಿ ಜಿಲ್ಲೆ

 

7

ಮೀನಾಕ್ಷಿ

ನುರಿತರು, ಸ್ವಯಂ ಸೇವಕರು

copy editor, ಮೈಸೂರು ಬ್ರೈಲ್ ಮುದ್ರಣಾಲಯ

 

ಪ್ರಸ್ತುತ ಅಂಧ ಮಹಿಳಾ ನೌಕರರ ಆರ್ಥಿಕ ಔದ್ಯೋಗಿಕ ಹಾಗು ಸಾಮಾಜಿಕ ಸ್ಥಿತಿಗತಿಗಳನ್ನು ಅರಿತುಕೊಂಡು ತನ್ಮೂಲಕ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದಕ್ಕಾಗಿ ಪ್ರಾಥಮಿಕ ಸಮೀಕ್ಷೆಯೊಂದನ್ನು ಕೈಗೊಳ್ಳಲು ಸಮಿತಿಯು ನಿರ್ಣಯಿಸಿರುತ್ತದೆ.

ಸದರಿ ನಿರ್ಣಯದಂತೆ ಸಮಿತಿಯು ಸುದೀರ್ಘವಾಗಿ ಚರ್ಚಿಸಿ ಬಹು ಆಯ್ಕೆ ಮತ್ತು ವಿವರಣಾತ್ಮಕ ಮಾದರಿಯ ಸಮೀಕ್ಷಾ ನಮೂನೆಯನ್ನು ಸಿದ್ಧಪಡಿಸಿ ಸಮಿಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿರುತ್ತದೆ.

ಇಲ್ಲಿಯ ತನಕ ಯಾವುದೇ ನೌಕರ ಸಂಘವು ಅಂಧ ನೌಕರರ ಕುರಿತು ಕರ್ನಾಟಕದಲ್ಲಿ ಸಮಿಕ್ಷೆಯನ್ನು ಕೈಗೊಂಡು ಅಂಧ ನೌಕರರ ತೊಡಕುಗಳ ಕುರಿತು ಬೆಳಕು ಚೆಲ್ಲಲು ಪ್ರಯತ್ನಿಸಿದ ಸುಳಿವು ಕಂಡುಬಂದಿರುವುದಿಲ್ಲ ಮತ್ತು ನೌಕರಿಗೆ ಸೇರಿದ್ದಾಗ್ಯೂ ಅಂಧ ಮಹಿಳೆಯರು ಆರ್ಥಿಕವಾಗಿ ಸಬಲೀಕರಣದ ವೇದಿಕೆಯಲ್ಲಿದ್ದಾಗ್ಯೂ, ಸೂಕ್ತ ಸವಲತ್ತುಗಳ ಕೊರತೆ ಇರುವುದು ಕಂಡುಬಂದುದ್ದರಿಂದ, ಸಮಿಕ್ಷೆಯನ್ನು ಕೈಗೊಳ್ಳುವುದು ಅನಿವಾರ್ಯವೆಂದು ಸಮಿತಿಗೆ ಮನನವಾಗಿರುತ್ತದೆ. ಸಮಿಕ್ಷೆಯಿಂದ ಕಂಡುಬಂದ ಫಲಿತಾಂಶವು ನಿಜಕ್ಕೂ ಬೆರಗುಪಡುವ ಮತ್ತು ಮನಕಲಕುವ ಸಂಗತಿಯನ್ನು ಹೊರಹಾಕಿರುತ್ತದೆ.

ಸದಸ್ಯತ್ವ ಪಡೆದ ರಾಜ್ಯ ಸರ್ಕಾರಿ ಅಂಧ ಮಹಿಳಾ ನೌಕರರ ಒಟ್ಟು ಸಂಖ್ಯೆ 87 ಅದರಲ್ಲಿ ಸಮೀಕ್ಷೆಗೆ ಒಳಪಟ್ಟವರ ಸಂಖ್ಯೆ 64 ಆಗಿದ್ದು, ಪಡೆದ ಎಲ್ಲಾ ಮಾಹಿತಿಯು ನಿಖರ ಮತ್ತು ಭವಿಷ್ಯತ್ತಿನ ಯೋಜನೆಗಳಿಗೆ ಹಾಗೂ ಸಮಸ್ಯೆಗಳ ನಿವಾರಣೆಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಳ್ಳಲು ಅನುವಾಗಿದೆ.

1.2. ಉದ್ದೇಶಗಳು:

(1.) ಸಂಪೂರ್ಣ ಹಾಗೂ ದೃಷ್ಟಿಮಾಂದ್ಯ ಮಹಿಳಾ ನೌಕರರ ಸಂಖ್ಯೆ, ಅಂಧತ್ವದ ಪ್ರಮಾಣವಾರು ಅಂಧ ನೌಕರ ಮಹಿಳೆಯರ ಸಂಖ್ಯೆ, ಅವರ ಅವಲಂಭಿತರುಗಳಲ್ಲಿ ಎಷ್ಟು ಮಂದಿ ಅಂಗವಿಕಲತೆಯನ್ನು ಹೊಂದಿದ್ದಾರೆಂದು ಮತ್ತು ಬಹುವಿಧ ಅಂಗವಿಕಲತೆಯಲ್ಲಿ ಎಷ್ಟು ಮಂದಿ ಬಳಲುತ್ತಿರುವವರೆಂದು ನಿಖರ ಮಾಹಿತಿಯನ್ನು ಪಡೆಯುವುದು.

(2.) ಅಂಧ ನೌಕರ ಮಹಿಳೆಯರನ್ನು ಇಲಾಖವಾರು ಮತ್ತು ಹುದ್ದೆವಾರು ವಿಂಗಡಿಸಿ ಔದ್ಯೋಗಿಕ ಕ್ಷೇತ್ರದಲ್ಲಿ ಏಳಿಗೆ ಸಾಧಿಸುವಂತೆ ರೂಪುರೇಷೆಯನ್ನು ಸಿದ್ಧಪಡಿಸಿಕೊಳ್ಳುವುದು.

(3.) ಸಹೋದ್ಯೋಗಿ ಮತ್ತು ಅಂಧ ಮಹಿಳೆಯರೊಡನೆ ಇರಬಹುದಾದ ಸಮನ್ವಯತೆ ಗುಣವನ್ನು ಖಾತ್ರಿಪಡಿಸಿಕೊಳ್ಳುವುದು.

(4.) ತಂತ್ರಜ್ಞಾನ ಹಾಗೂ ತಂತ್ರೋಪಕರಣಗಳ ಪ್ರಯೋಜನಗಳ ಕುರಿತು ಎಷ್ಟು ಅಂಧ ನೌಕರ ಮಹಿಳೆಯರು ಅರಿವನ್ನು ಹೊಂದಿದ್ದಾರೆ ಮತ್ತು ಎಷ್ಟು ಅಂಧ ಮಹಿಳೆಯರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಅರಿತುಕೊಳ್ಳುವುದು.

(5.) ಕಛೇರಿಯ ಆಡಳಿತಾತ್ಮಕ ಹಾಗೂ ಬೌತಿಕ ವಾತಾವರಣ ಎಷ್ಟರಮಟ್ಟಿಗೆ ಅಂಗವಿಕಲ ಸ್ನೇಹಿಯಾಗಿರಬಹುದು ಎನ್ನುವುದನ್ನು ತಿಳಿದುಕೊಳ್ಳುವುದು.

(6.) ಸಾಂಸಾರಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸಮಚಿತ್ತದಲ್ಲಿ ಸಹಭಾಗಿಯಾಗುತ್ತಿರುವವರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.

(7.) ಕಡುಬಡತನದಿಂದ ಬಿಡುಗಡೆ ಹೊಂದಿದ ಅಂಧ ಮಹಿಳೆಯರ ಸಂಖ್ಯೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳುವುದು.

(8.) ಸಾರಿಗೆ ವ್ಯವಸ್ಥೆ, ಜಾರಿಯಲ್ಲಿರುವ ಸಾರಿಗೆ ನಿಯಮಾವಳಿ ಹಾಗೂ ಅಂಧರು ಪಡೆಯುವ ಚಲನವಲನ ತರಭೇತಿ ಇವುಗಳ ತೌಲನಿಕ ಅಧ್ಯಯನವನ್ನು ಕೈಗೊಳ್ಳುವುದು.

(9.) ಹವ್ಯಾಸಗಳು ಮಾನಸಿಕ ಒತ್ತಡವನ್ನು ನಿವಾರಿಸುವ ಔಷಧಿಯಾಗಿರುವುದರಿಂದ, ವೃತ್ತಿಯ ಜೊತೆಗೆ ಪ್ರವೃತ್ತಿ ಹೊಂದಿದವರ ಮಾಹಿತಿಯನ್ನು ಪಡೆಯುವುದು.

1.3. ವ್ಯಾಪ್ತಿ:

ರಾಜ್ಯವ್ಯಾಪಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಂಘಟನೆಯ ಸದಸ್ಯತ್ವವನ್ನು ಪಡೆದುಕೊಂಡಿರುವ ಎಲ್ಲಾ ಅಂಧ ಮಹಿಳಾ ನೌಕರರಿಗೆ ಅಧಿಕೃತವಾಗಿ ಸಮಿಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದುದ್ದರಿಂದ ಸಮೀಕ್ಷೆಯು ಸದರಿ ಸಂಘದ ಸದಸ್ಯತ್ವ ಪಡೆದವರಿಗೆ ಮಾತ್ರ ಸೀಮಿತವಾಗಿರುತ್ತದೆ.

1.4. ಮಾಹಿತಿ ಸಂಗ್ರಹಣೆಯ ಮಾಧ್ಯಮ:

ಪ್ರಾಥಮಿಕವಾಗಿ ಸ್ವಯಂಸೇವಕರ ನೆರವಿನಿಂದ ಸಮೀಕ್ಷಾ ನಮೂನೆಯನ್ನು ಭರ್ತಿಗೊಳಿಸಲು ಸಂದರ್ಶನ ಮಾದರಿಯಲ್ಲಿ ಮತ್ತು ಸಮಿಕ್ಷಾ ನಮೂನೆಯನ್ನು ಸ್ವಯಂ ಭರ್ತಿಗೊಳಿಸುವಿಕೆಯ ಸ್ವರೂಪದಲ್ಲಿ ಜಾಲತಾಣ ಆಧಾರಿತ ಮಾಧ್ಯಮದ ಮೂಲಕ ಸಮೀಕ್ಷೆಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರಶ್ನಾವಳಿಯು ಬಹು ಆಯ್ಕೆ ಹಾಗೂ ವಿವರನಾತ್ಮಕ ಮಾದರಿಯಿಂದ ಕೂಡಿರುತ್ತದೆ.

1.5. ಸಮೀಕ್ಷೆಯ ಮಿತಿಗಳು:

ಸಂಘಟನೆಯ ಸದಸ್ಯತ್ವವನ್ನು ಪಡೆದುಕೊಂಡಿರುವ 87 ಅಂಧ ಮಹಿಳಾ ನೌಕರರ ಪೈಕಿ 64 ಮಹಿಳಾ ನೌಕರರು ಸಮಿಕ್ಷೆಯಲ್ಲಿ ಭಾಗವಹಿಸಿರುತ್ತಾರೆ. ಉಳಿದ 23 ಮಹಿಳೆಯರಿಗೆ ಸಮಿಕ್ಷೆಯ ಕುರಿತು ಸಂಪೂರ್ಣ ತಿಳುವಳಿಕೆ ನೀಡಲಾಗಿತ್ತಾದರೂ ಅವರು ಆರೋಗ್ಯ ಸಮಸ್ಯೆ, ಮಕ್ಕಳ ಪೋಷಣೆ, ಕೌಟುಂಬಿಕ ನಿರ್ವಹಣೆ, ಕಛೇರಿಯ ಕೆಲಸಗಳು ಇತ್ಯಾದಿ ಕಾರಣಗಳನ್ನು ನೀಡಿ ಸಮಿಕ್ಷೆಯಿಂದ ಹೊರಗುಳಿದಿರುತ್ತಾರೆ. ಹೊಸದಾಗಿ ಸದಸ್ಯತ್ವ ಪಡೆದುಕೊಂಡಿರುವ ಮಹಿಳಾ ನೌಕರರ ಮೊಬೈಲ್ ನಂಬರ್ಗಳು ಲಭ್ಯವಾಗದ ಕಾರಣ ಅವರನ್ನು ಸಂಪರ್ಕಿಸಲಾಗಿಲ್ಲ.

*************


 

ಅಧ್ಯಾಯ-2. ವಿಶ್ಲೇಷಣೆ.

ಸಮಿಕ್ಷೆಯಲ್ಲಿ ಪಡೆದ ಬಹುಆಯ್ಕೆ ಮಾದರಿಯ ಉತ್ತರಗಳನ್ನು ಅಂಕಿ ಅಂಶ ಆಧಾರಿತ ವಿಶ್ಲೇಷಣೆಗೆ ಒಳಪಡಿಸಿ ಫಲಿತಾಂಶವನ್ನು ಅಂಕಿಗೆ ಪರಿವರ್ತಿಸಲಾಗಿದೆ. ವಿವರಣಾತ್ಮಕ ಉತ್ತರಗಳನ್ನು ವಿವರಣಾತ್ಮಕ ವಿಶ್ಲೇಷಣೆಗೆ ಒಳಪಡಿಸಲು ನಿರ್ಣಯವನ್ನು ಕೈಗೊಳ್ಳಲಾಗಿರುತ್ತದೆ.

2.1 ಸಮಿಕ್ಷೆಯ ಪ್ರಶ್ನಾವಳಿ:

ಅಂಧ ಮಹಿಳಾ ನೌಕರರ ಔದ್ಯೋಗಿಕ ಮತ್ತು ಸಾಮಾಜಿಕ ಪರಿಸ್ಥಿತಿ ಕುರಿತು ಪ್ರಾಥಮಿಕ ಸಮೀಕ್ಷೆ

ಸಮೀಕ್ಷೆಯ ಉದ್ದೇಶ

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಸಂವಿಧಾನದ ಅನ್ವಯ, ಅಂಧ ಮಹಿಳಾ ನೌಕರರ ಸರ್ವತೋಮುಖ ಅಭಿವೃದ್ಧಿಗೆ ಹಾಗು ಸಬಲೀಕರಣಗೊಳಿಸುವುದಕ್ಕಾಗಿ ಮಹಿಳಾ ಆಧ್ಯತಾ ಸಮಿತಿಯನ್ನು ಸಂಘವು ರಚಿಸಿರುತ್ತದೆ. ಪ್ರಸ್ತುತ ಅಂಧ ಮಹಿಳಾ ನೌಕರರ ಸ್ಥಿತಿಗತಿಗಳನ್ನು ಅರಿತುಕೊಂಡು ತನ್ಮೂಲಕ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದಕ್ಕಾಗಿ ಪ್ರಾಥಮಿಕ ಸಮೀಕ್ಷೆಯೊಂದನ್ನು ಕೈಗೊಳ್ಳಲು ಸದರಿ ಸಮಿತಿಯು ತೀರ್ಮಾನಿಸಿರುತ್ತದೆ.

 

ಈ ಹಿನ್ನೆಲೆಯಲ್ಲಿ ಸಮಿತಿಯು ಸುದೀರ್ಘವಾಗಿ ಚರ್ಚಿಸಿ ಸಮೀಕ್ಷಾ ನಮೂನೆಯನ್ನು ಸಿದ್ಧಪಡಿಸಿರುತ್ತದೆ. ಈ ಸಮಿಕ್ಷೆಯಲ್ಲಿ ಎಲ್ಲಾ ಅಂಧ ಮಹಿಳಾ ನೌಕರರು ಸಕ್ರೀಯವಾಗಿ ಭಾಗವಹಿಸುವುದರೊಂದಿಗೆ ಸಮೀಕ್ಷೆಯ ಉದ್ದೇಶವನ್ನು ಸಾಕಾರಗೊಳಿಸಬೇಕೆಂದು ಸಮಿತಿಯು ವಿನಂತಿಸಿಕೊಳ್ಳುತ್ತದೆ. ತಮ್ಮೆಲ್ಲರ ಪಾಲ್ಗೊಳ್ಳುವಿಕೆಯಿಂದಾಗಿ ಔಚಿತ್ಯಪೂರಿತ ಮಾಹಿತಿ ಲಭ್ಯವಾಗುತ್ತದೆ ಎಂಬ ವಿಶ್ವಾಸವಿದೆ. ಇದಕ್ಕಾಗಿ ಎಲ್ಲಾ ಅಂಧ ಮಹಿಳಾ ನೌಕರರು ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನಿರಿಸೋಣ.

 

ವೈಯಕ್ತಿಕ ವಿವರಗಳು:

1. ಪೂರ್ಣ ಹೆಸರು

 

2. ಜನ್ಮ ದಿನಾಂಕ

 

3. ಧಾರಣ ಮಾಡಿದ ಹುದ್ದೆ. Process-server / psychiatric social worker / assistant Professor / attender / SDA/ FDA/ PDO/ SDAA music teacher/ subject teacher/ PUC Lecturer / other

 

4. ಇಲಾಖೆಯ ಹೆಸರು

 

5. ಕಛೇರಿ ವಿಳಾಸ

 

5.a ಕಛೇರಿ ಇರುವ ಜಿಲ್ಲೆ.

 

6. ಖಾಯಂ ವಿಳಾಸ

 

6.a ಖಾಯಂ ವಿಳಾಸದ ಜಿಲ್ಲೆ.

 

7. Mobile number.

 

8. E-Mail ವಿಳಾಸ.

 

ಅಂಗವಿಕಲತೆಯ ಸ್ವರೂಪದ ವಿವರಗಳು:

1. ನಿಮ್ಮ ಅಂಧತ್ವದ ಸ್ವರೂಪ? ಅಂಧ/ ದೃಷ್ಟಿಮಾಂದ್ಯ

 

2. ಅಂಧತ್ವ ಪ್ರಮಾಣ ತಿಳಿಸಿ

 

3. ಅಂಧತ್ವದ ಹೊರತಾಗಿ ಇತರೆ ರೀತಿಯ ಅಂಗವಿಕಲತೆ ತಮಗೆ ಇದೆಯೆ?

ಹೌದು/ ಇಲ್ಲ.

 

3 a. ಹೌದು ಎಂದು ಗುರುತಿಸಿದ್ದೀರಿ. ಅದರ ವಿವರ ತಿಳಿಸಿ.

 

ಔದ್ಯೋಗಿಕ ಸಂಬಂಧಿತ ವಿವರ:

1. ಕಛೇರಿಯಲ್ಲಿ ನೀವು ನಿರ್ವಹಿಸುತ್ತಿರುವ ಕೆಲಸ ಕಾರ್ಯಗಳಾವುವು?

 

2. ನೀವು ನಿರ್ವಹಿಸಬಹುದಾದ ಕಾರ್ಯಗಳ ಕುರಿತು ನಿಮ್ಮ ಮೇಲಾಧಿಕಾರಿಗೆ ತಿಳುವಳಿಕೆ ಇದೆಯೆ?

ಹೌದು/ ಇಲ್ಲ/ ಗೊತ್ತಿಲ್ಲ.

 

3. ಕಛೇರಿ ಕಾರ್ಯನಿರ್ವಹಣೆಗೆ ಸಂಭಂಧಿಸಿದ ಕಂಪ್ಯೂಟರ್ಗಳು ಹಾಗೂ ತಂತ್ರಾಂಶಗಳು ಅಂಧ ಸ್ನೇಹಿಯಾಗಿವೆಯೆ?

ಹೌದು / ಇಲ್ಲ.

 

3.A ಹೌದು ಎಂದು ಗುರುತಿಸಿದ್ದೀರಿ. ನೀವು ಕಛೇರಿಯಲ್ಲಿ ಕಂಪ್ಯೂಟರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದರೆ ಅದರ ವಿವರವನ್ನು ಬರೆಯಿರಿ.

 

4. ಕಛೇರಿಯ ಇತರೆ ಸಿಬ್ಬಂದಿಗಳು ನಿಮ್ಮೊಂದಿಗೆ ಸಹಕರಿಸುತ್ತಾರಾ?

ಹೌದು/ ಇಲ್ಲ

 

5. ಕಛೇರಿಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಂಡುಕೊಂಡ ಪರಿಹಾರಗಳಾವುವು?

 

6. ಇಲಾಖೆಯ ವತಿಯಿಂದ ಹುದ್ದೆಗನುಗುಣವಾಗಿ ಯಾವುದಾದರೂ ತರಬೇತಿಗೆ ನಿಯೋಜನೆಗೊಂಡಿದ್ದೀರ?

ಹೌದು/ ಇಲ್ಲ.

 

6.a ಹೌದು ಎಂದು ಗುರುತಿಸಿದ್ದೀರಿ. ಪಡೆದುಕೊಂಡ ತರಬೇತಿಯ ವಿವರ ಬರೆಯಿರಿ.

 

7. ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಅವಶ್ಯಕವಾಗುವಂತಹ ತರಬೇತಿಯನ್ನು ಸೂಚಿಸಿರಿ.

 

8. ಕಛೇರಿಯ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸಿದ್ದರ ನಿಮಿತ್ತ ಯಾವುದಾದರೂ ಪ್ರಶಸ್ತಿಗಳಿಗೆ ಭಾಜನರಾಗಿದ್ದೀರಾ?

ಹೌದು/ ಇಲ್ಲ.

 

8.a ಹೌದು ಎಂದು ತಿಳಿಸಿದ್ದೀರಿ. ಅದರ ವಿವರವನ್ನು ತಿಳಿಸಿ.

 

9. ಕಛೇರಿಯ ಕಟ್ಟಡ ವಿನ್ಯಾಸ, ಶೌಚಾಲಯ ಹಾಗೂ ಇತರೇ ಪರಿಸರವು ಅಂಧ ಮತ್ತು ಅಂಗವಿಕಲ ಸ್ನೇಹಿಯಾಗಿವೆಯೇ?

ಹೌದು/ ಇಲ್ಲ.

 

9.a ಇಲ್ಲವೆಂದು ಗುರುತಿಸಿದ್ದೀರಿ. ಆಗಬೇಕಿರುವ ಸುಧಾರಣೆಗಳನ್ನು ತಿಳಿಸಿರಿ.

 

10. ಮಹಿಳಾ ಸರ್ಕಾರಿ ನೌಕರರಾಗಿ ಸರ್ಕಾರದ ಸೌಲಭ್ಯಗಳಾದ ಮಾತೃತ್ವ ರಜೆ, ಹೆರಿಗೆ ಭತ್ಯೆಯಂತಹ ಇತರೆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿದ್ದರೆ, ಈ ಸೌಲಭ್ಯಗಳಲ್ಲಿ ಆಗಬೇಕಿರುವ ಸುಧಾರಣೆಗಾಗಿ ಅಥವಾ ಕಂಡುಕೊಂಡಿರುವ ತೊಡಕುಗಳ ಕುರಿತು ತಿಳಿಸಬಹುದು.

 

ಆರ್ಥಿಕ ಸಬಲೀಕರಣ

1. ಆರ್ಥಿಕ ಸಶಕ್ತಿಕರಣಕ್ಕಾಗಿ ಸರ್ಕಾರದ ಯಾವುದಾದರು ವಿಶೇಷ ಯೋಜನೆಗಳ ಕುರಿತು ಇತರೆ ಮಹಿಳಾ ಸದಸ್ಯರಿಗೆ ಮಾಹಿತಿ ನೀಡುವುದಿದ್ದರೆ ತಿಳಿಸಿರಿ.

 

2. ಆರ್ಥಿಕ ಸಬಲೀಕರಣಕ್ಕಾಗಿ ನಿಮ್ಮಲ್ಲಿ ಯಾವುದಾದರು ವಿಶೇಷ ಆಲೋಚನೆಗಳಿದ್ದರೆ ತಿಳಿಸಬಹುದು.

 

3. ನೀವು ವೇತನದಿಂದ ತಿಂಗಳಿಗೆ KGID, EGIS ಮತ್ತು LIC ರೀತಿಯ ವಿಮೆಗಳನ್ನು ಹೊರತುಪಡಿಸಿ ಅಂದಾಜು ಎಷ್ಟು ಹಣವನ್ನು ಉಳಿತಾಯಕ್ಕೆಂದು ವಿನಿಯೋಗಿಸುತ್ತೀರ? ರೂ ೫೦೦ಗಿಂತಲೂ ಕಡಿಮೆ/ 50೦ರೂಗಳಿಂದ 1000ರೂಗಳು / ೧೦೦೦ ರೂಗಳಿಗಿಂತ ಹೆಚ್ಚು / ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ.

 

3.a ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂಬುವುದಾಗಿ ಗುರುತಿಸಿದ್ದೀರಿ? ಇದಕ್ಕೆ ಇರುವ ಕಾರಣಗಳನ್ನು ತಿಳಿಸಿರಿ.

 

ವೈವಾಹಿಕ ಜೀವನದ ಮತ್ತು ಅವಲಂಭಿತರ ವಿವರಗಳು:

1. ನೀವು? ವಿವಾಹಿತರು/ ಅವಿವಾಹಿತರು

 

1.a. ವಿವಾಹಿತರು ಎಂದು ತಿಳಿಸಿದ್ದೀರಿ. ನಿಮ್ಮ ಪತಿ ಪ್ರಸ್ಥುತ: ನಿರುದ್ಯೋಗಿ/ ಸರ್ಕಾರಿ ಉದ್ಯೋಗಿ/ ಖಾಸಗಿ ಉದ್ಯೋಗಿ/ ಸ್ವ-ಉದ್ಯೋಗಿ.

 

1.B. ವಿವಾಹಿತರು ಎಂದು ತಿಳಿಸಿದ್ದೀರಿ. ನಿಮ್ಮ ಪತಿ ಪ್ರಸ್ಥುತ: ಜೊತೆಯಲ್ಲಿದ್ದಾರೆ / ವಿಚ್ಛೇದಿತಗೊಂಡಿದ್ದಾರೆ / ದೈವಾಧಿನರಾಗಿದ್ದಾರೆ.

 

2. ನಿಮ್ಮ ಅವಲಂಭಿತರು ಅಥವಾ ಸಂಬಂಧಿಕರುಗಳಲ್ಲಿ ಯಾರಿಗಾದರೂ ಅಂಗವಿಕಲತೆ ಇದೆಯೇ? ಹೌದು / ಇಲ್ಲ.

 

2.a. ಹೌದು ಎಂದು ಗುರುತಿಸಿದ್ದೀರಿ. ಯಾರಿಗೆ? ಪತಿ / ಮಗು / ತಂದೆ /ತಾಯಿ / ಸಹೋದರ / ಸಹೋದರಿ ಪತಿಯ ತಂದೆ/ ಪತಿಯ ತಾಯಿ.

 

3. ವಿಧವೆ ಅಥವಾ ವಿಚ್ಛೇದಿತ ಅಂಧ ಮಹಿಳಾ ನೌಕರರಾಗಿದ್ದಲ್ಲಿ ಸರ್ಕಾರದಿಂದ ಸಿಗಬಹುದಾದ ಯಾವುದಾದರು ಯೋಜನೆಗಳ ಲಾಭ ಪಡೆದುಕೊಂಡಿದ್ದಿರಾ?

ಹೌದು/ ಇಲ್ಲ.

 

4. ಸರ್ಕಾರಿ ಕೆಲಸ ಸಿಗುವ ಮೊದಲು ನೀವು BPL ಫಲಾನುಭವಿಯಾಗಿದ್ದೀರ?

ಹೌದು/ ಇಲ್ಲ.

 

ಸ್ವಯಂ ರಕ್ಷಣಾ ತಂತ್ರಗಳು:

1. ಅಂಧ ಮಹಿಳೆ ಕಛೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವ-ರಕ್ಷಣೆಗೆ ಯಾವೆಲ್ಲಾ ತಂತ್ರಗಳನ್ನು ಅನುಸರಿಸಬಹುದು ತಿಳಿಸಿ.

 

2. ಸ್ವ-ರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯಗಾರವನ್ನು ಏರ್ಪಡಿಸಿದರೆ ತಾವು ಪಾಲ್ಗೊಳ್ಳುವ ಇಚ್ಛೆ ಇದೆಯೇ? ಹೌದು / ಇಲ್ಲ.

 

ಚಲನವಲನ ತರಬೇತಿ ಮತ್ತು ಸಾರಿಗೆ ವ್ಯವಸ್ಥೆ ಕುರಿತು ವಿವರ:

1. ಕಛೇರಿಗೆ ತೆರಳಲು ಸಮರ್ಪಕ ಸಾರಿಗೆ ವ್ಯವಸ್ಥೆ ಇದೆಯೆ? ಹೌದು / ಇಲ್ಲ.

 

.a ಇಲ್ಲವೆಂದು ಗುರುತಿಸಿದ್ದೀರ. ಸುಧಾರಣೆಗಾಗಿ ಸಲಹೆ ನೀಡಿ.

 

2. ಯಾವುದಾದರು ಸಂಸ್ಥೆಯಿಂದ ಚಲನವಲನ ತರಬೇತಿ ಪಡೆದುಕೊಂಡಿದ್ದಿರಾ? ಹೌದು / ಇಲ್ಲ.

 

2.a ಹೌದು ಎಂದು ಗುರುತಿಸಿದ್ದೀರಿ. ಸಂಸ್ಥೆಯ ಹೆಸರನ್ನು ತಿಳಿಸಿರಿ.

 

3. ಮನೆಯಿಂದ ಕಛೇರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಚಲನವಲನ ತರಬೇತಿಯಲ್ಲಿ ತಿಳಿಸಿದ ನಿಯಮಗಳನ್ನು ಪಾಲಿಸಲು ತಮಗೆ ಸಹಕಾರಿಯಾಗಿದೆಯೆ?

ಹೌದು / ಇಲ್ಲ.

 

3.a ಇಲ್ಲವೆಂದು ಗುರುತಿಸಿದ್ದೀರ. ಆಗುತ್ತಿರುವ ತೊಡಕುಗಳ ವಿವರ ಮತ್ತು ಪರಿಹಾರವನ್ನು ಸೂಚಿಸಿರಿ.

 

ಸಾಮಾಜಿಕ ಜಾಲತಾಣಗಳು:

1. ತಾವು ಹೆಚ್ಚು ಯಾವ ಸಾಮಾಜಿಕ ಜಾಲವನ್ನು ಬಳಸುತ್ತಿದ್ದೀರ? whatsapp/ facebook/ twitter / ಯಾವುದೂ ಇಲ್ಲ.

 

ಹವ್ಯಾಸಗಳು:

ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ರೂಢಿಸಿಕೊಂಡಿರುವ ಸದಭಿರುಚಿ ಹವ್ಯಾಸಗಳಿದ್ದರೆ ತಿಳಿಸಿರಿ. ಬರವಣಿಗೆ, ಹಾಡುಗಾರಿಕೆ, ರಾಗ ಜೋಡನೆ, ಇತರೆ.

 

ಇತರೆ ಅಂಶಗಳು:

ಮಹಿಳಾ ಸಬಲೀಕರಣದ ದೃಷ್ಟಿಯಿಂದ ಅತ್ಯವಶ್ಯಕವೆನಿಸುವ ಯಾವುದಾದರು ವಿಶೇಷ ಕಾರ್ಯಕ್ರಮಗಳು, ತರಬೇತಿ, ಯೋಜನೆಗಳು, ಕಾರ್ಯಾಗಾರಗಳು, ವಿಚಾರ ಸಂಕೀರ್ಣಗಳನ್ನು ಸೂಚಿಸಬಹುದು.

 

 

2.2. ಬಹು ಆಯ್ಕೆ ಮಾದರಿ ಪ್ರಶ್ನೋತ್ತರಗಳ ವಿಶ್ಲೇಷಣೆ:

ಸದಸ್ಯತ್ವ ಪಡೆದ ರಾಜ್ಯ ಸರ್ಕಾರಿ ಅಂಧ ಮಹಿಳಾ ನೌಕರರ ಒಟ್ಟು ಸಂಖ್ಯೆ 87.

ಅದರಲ್ಲಿ ಸಮೀಕ್ಷೆಗೆ ಒಳಪಟ್ಟವರ ಸಂಖ್ಯೆ 64

ಸಮೀಕ್ಷೆಗೆ ಒಳಪಟ್ಟ ಅಂಧ ಮಹಿಳಾ ನೌಕರರ ವಿವರಗಳನ್ನು ಅಂಕಿ ಅಂಶಕ್ಕೆ ಪರಿವರ್ತಿಸಿ

ಈ ಕೆಳಗಿನಂತೆ ನೀಡಲಾಗಿದೆ

ಪ್ರಶ್ನೆಗಳು:

ಆಯ್ಕೆಗಳು/ ಪಡೆದ ಉತ್ತರಗಳು:

ಫಲಿತಾಂಶ

1. ಅಂಧತ್ವ ಸ್ವರೂಪ?

ಅಂಧ

53

ದೃಷ್ಟಿಮಾಂದ್ಯ

11

2. ಅಂಧತ್ವ ಪ್ರಮಾಣ?

40%

1

45%

1

50%

3

75%

2

100%

57

3. ಅಂಧತ್ವದ ಹೊರತಾಗಿ ಇತರೆ ರೀತಿಯ ಅಂಗವಿಕಲತೆ ಇದೆಯೇ?

ಹೌದು

1

ಇಲ್ಲ

63

4. ಧಾರಣೆ ಮಾಡಿದ ಹುದ್ದೆ

Teacher

1

D-group workers

1

Attender

5

Music Teacher

11

PDO

2

FDA

10

SDA

23

SDAA

6

Subject Teacher

5

5. ಇಲಾಖೆಯ ಹೆಸರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

4

ಕರ್ನಾಟಕ ವಿಮಾ ಇಲಾಖೆ

1

ಕಾನೂನು ಇಲಾಖೆ

1

ಖಜಾನೆ ಇಲಾಖೆ

5

ಅರಣ್ಯ ಇಲಾಖೆ

1

ಕೈ ಮಗ್ಗ ಮತ್ತು ಜವಳಿ ಇಲಾಖೆ

1

RDPR

8

ನ್ಯಾಯಾಂಗ ಇಲಾಖೆ

24

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

1

ವಾಣಿಜ್ಯ ಇಲಾಖೆ

1

ಶಿಕ್ಷಣ ಇಲಾಖೆ

16

ವಿಕಲ ಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ

1

6. ಖಾಯಂ ವಿಳಾಸದ ಜಿಲ್ಲೆ: *

ಕಲ್ಬುರ್ಗಿ

8

ಕೊಪ್ಪಳ

3

ಚಿತ್ರದುರ್ಗ

1

ತುಮಕೂರು

4

ದಾವಣಗೆರೆ

2

ದಾರವಾಡ

4

ಬಳ್ಳಾರಿ

2

ಬಾಗಲಕೋಟೆ

1

ಬೀದರ್

5

ಬೆಂಗಳೂರು ನಗರ

7

ಬೆಳಗಾವಿ

9

ಮಂಡ್ಯ

2

ಮೈಸೂರು

7

ರಾಮನಗರ

3

ಶಿವಮೋಗ್ಗ

1

ವಿಜಯಪುರ

1

ಹಾವೇರಿ

2

ಹಾಸನ

2

7. ಕಛೇರಿ ಇರುವ ಜಿಲ್ಲೆ

ಕಲ್ಬುರ್ಗಿ

7

ಕೋಲಾರ

2

ಗದಗ

1

ಚಾಮರಾಜ ನಗರ

1

ಚಿಕ್ಕಮಗಳೂರು

2

ಚಿತ್ರದುರ್ಗ

1

ತುಮಕೂರು

4

ದಕ್ಷಿಣ ಕನ್ನಡ

2

ದಾವಣಗೆರೆ

5

ದಾರವಾಡ

2

ಬಳ್ಳಾರಿ

3

ಬಾಗಲಕೋಟೆ

2

ಬೀದರ್

5

ಬೆಂಗಳೂರು ಗ್ರಾಮಾಂತರ

1

ಬೆಂಗಳೂರು ನಗರ

7

ಬೆಳಗಾವಿ

3

ಮಂಡ್ಯ

1

ಮೈಸೂರು

5

ರಾಮನಗರ

3

ರಾಯಚೂರು

1

ವಿಜಯಪುರ

1

ಹಾವೇರಿ

2

ಹಾಸನ

1

ಶಿವಮೊಗ್ಗ

2

8. ನೀವು ನಿರ್ವಹಿಸಬಹುದಾದ ಕಾರ್ಯಗಳ ಕುರಿತು ನಿಮ್ಮ ಮೇಲಾಧಿಕಾರಿಗೆ ತಿಳುವಳಿಕೆ ಇದೆಯೇ?

ಹೌದು

58

ಇಲ್ಲ

3

ಗೊತ್ತಿಲ್ಲ

3

9. ಕಛೇರಿ ಕಾರ್ಯನಿರ್ವಹಣೆಗೆ ಸಂಭಂದಿಸಿದ ಕಂಪ್ಯೂಟರ‍್ ಹಾಗೂ ತಂತ್ರಾಂಶಗಳು ಅಂಧ ಸ್ನೇಹಿಯಾಗಿವೆಯೇ?

ಹೌದು

12

ಇಲ್ಲ

52

10. ಕಛೇರಿಯ ಇತರೆ ಸಿಬ್ಬಂದಿಗಳು ನಿಮ್ಮೊಂದಿಗೆ ಸಹಕರಿಸುತ್ತಾರೆಯೇ?

ಹೌದು

57

ಇಲ್ಲ

7

11. ಇಲಾಖೆಯ ವತಿಯಿಂದ ಹುದ್ದೆಗನುಗುಣವಾಗಿ ಯಾವುದಾದರೂ ತರಬೇತಿಗೆ ನಿಯೋಜನೆಗೊಂಡಿದ್ದೀರಾ?

ಹೌದು

25

ಇಲ್ಲ

39

12. ಕಛೇರಿಯ ಕರ್ತವ್ಯವನ್ನು ದಕ್ಷತೆಯಿಂದ ನಿರ್ವಹಿಸಿದ್ದರ ನಿಮಿತ್ತ ಯಾವುದಾದರೂ ಪ್ರಶಸ್ತಿಗಳಿಗೆ ಭಾಜನರಾಗಿದ್ದೀರಾ?

ಹೌದು

5

ಇಲ್ಲ

59

13. ಕಛೇರಿಯ ಕಟ್ಟಡ ವಿನ್ಯಾಸ, ಶೌಚಾಲಯ ಹಾಗೂ ಇತರೆ ಪರಿಸರ ಅಂಧ ಸ್ನೇಹಿಯಾಗಿವೆಯೇ?

ಹೌದು

53

ಇಲ್ಲ

11

14. ನೀವು ವಿವಾಹಿತರೇ ಅಥವಾ ಅವಿವಾಹಿತರೇ?

ವಿವಾಹಿತರು

25

ಅವಿವಾಹಿತರು

39

15. ನಿಮ್ಮ ಪತಿಯ ಔದ್ಯೋಗಿಕ ಸ್ಥಿತಿ

ನಿರುದ್ಯೋಗಿ

6

ಸರ್ಕಾರಿ ಉದ್ಯೋಗಿ

8

ಸ್ವ-ಉದ್ಯೋಗಿ

5

ಖಾಸಗಿ ಉದ್ಯೋಗಿ

5

ಅನ್ವಯಿಸುವುದಿಲ್ಲ

1

16. ನಿಮ್ಮ ಪತಿಯ ಸಹಬಾಳ್ವೆ ಸ್ಥಿತಿ

ಜೊತೆಯಲ್ಲಿದ್ದಾರೆ

23

ಪ್ರತ್ಯೇಕ ವಾಸ

1

ಮರಣ ಹೊಂದಿದ್ದಾರೆ

1

17. ನಿಮ್ಮ ಅವಲಂಬಿತರು ಅಥವಾ ಸಂಬಂಧಿಕರಲ್ಲಿ ಯಾರಿಗಾದರೂ ಅಂಗವಿಕಲತೆ ಇದೆಯೇ?

ಹೌದು

24

ಇಲ್ಲ

40

18. ಸರ್ಕಾರಿ ಕೆಲಸ ಸಿಗುವ ಮೊದಲು ನೀವು ಬಿ.ಪಿ.ಎಲ್. ಫಲಾನುಭವಿಯಾಗಿದ್ದೀರಾ?

ಹೌದು

44

ಇಲ್ಲ

20

19. ಸ್ವ ರಕ್ಷಣೆಗೆ ಸಂಭಂದಿಸಿದಂತೆ ಕಾರ್ಯಗಾರವನ್ನು ಏರ್ಪಡಿಸಿದರೆ ತಾವು ಪಾಲ್ಗೊಳ್ಳುವ ಇಚ್ಚೆ ಇದೆಯೇ?

ಹೌದು

63

ಇಲ್ಲ

1

20. ಯಾವುದಾದರೂ ಸಂಸ್ಥೆಯಿಂದ ಚಲನವಲನ ತರಬೇತಿ ಪಡೆದುಕೊಂಡಿದ್ದೀರಾ?

ಹೌದು

37

ಇಲ್ಲ

27

21. ಮನೆಯಿಂದ ಕಛೇರಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಚಲನ ವಲನ ತರಬೇತಿಯಲ್ಲಿ ತಿಳಿಸಿದ ನಿಯಮಗಳನ್ನು ಪಾಲಿಸಲು ತಮಗೆ ಸಹಕಾರಿಯಾಗಿದೆಯೇ?

ಹೌದು

41

ಇಲ್ಲ

23

22. ನೀವು ಹೆಚ್ಚು ಯಾವ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದೀರಾ?

whatsapp

45

ಯಾವುದೂ ಇಲ್ಲ

19

23. ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ರೂಢಿಸಿಕೊಂಡಿರುವ ಸದಭಿರುಚಿ ಹವ್ಯಾಸಗಳಿದ್ದರೆ ತಿಳಿಸಿರಿ.

ಹಾಡುಗಾರಿಕೆ

22

ಬರವಣಿಗೆ

15

ಇತರೆ

18

24. ಕುಟುಂಬದಲ್ಲಿ ಅಥವಾ ಸಂಭಂದಿಕರಲ್ಲಿ ನೌಕರರನ್ನು ಹೊರತುಪಡಿಸಿ ಬೇರೆ ಯಾರಲ್ಲಾದರೂ ಅಂಗವಿಕಲತೆ ಇದೆಯೆ?

ಪತಿ

6

ಸಹೋದರ

8

ಸಹೋದರಿ

6

ತಾಯಿ

2

 


2.3. ವಿವರಣಾತ್ಮಕ ಪ್ರಶ್ನೋತ್ತರಗಳ ವಿಶ್ಲೇಷಣೆ:

(1) ಅಂಗವಿಕಲತೆಯ ಸ್ವರೂಪದ ವಿವರಗಳು:

ಅಂಧತ್ವದಲ್ಲೆ ಅಂಧ ಹಾಗೂ ದೃಷ್ಟಿಮಾಂಧ್ಯ ಎಂಬ ವಿವಿಧ ಬಗೆಗಳಿವೆ. ಇದರ ಜೊತೆಗೆ ಕೆಲವರು ವಿವಿಧ ಅಂಧತ್ವದ ಖಾಯಿಲೆಗಳಲ್ಲಿ ಬಳಲುತ್ತಿದ್ದಾರೆ. ಕೆಲವರು ಇತರೆ ಅಂಗವಿಕಲತೆಯಿಂದ ಬಳಲುತ್ತಿರುವುದು ಮತ್ತು ಕೆಲವರ ಅವಲಂಭಿತರೂ ಕೂಡ ಅಂಗವಿಕಲತೆಯಿಂದ ಬಳಲುತ್ತಿರುವುದು ಸಮಿತಿಯ ಗಮನಕ್ಕೆ ಬಂದಿರುತ್ತದೆ.

ಹಿನ್ನೆಲೆಯಲ್ಲಿ ಸಮಿತಿಯು ನಮ್ಮ ಮಹಿಳೆಯರ ಅಂಧತ್ವ ಮತ್ತು ಅವರಿಗಿರುವ ಇತರೆ ಅಂಗವಿಕಲತೆಯ ಸ್ವರೂಪವನ್ನು ತಿಳಿದುಕೊಳ್ಳಲು ಕೆಲವು ವಿವರಗಳನ್ನು ಸಮಿಕ್ಷೆಯ ಮೂಲಕ ಪಡೆದುಕೊಂಡಿದೆ. ಪಡೆದುಕೊಂಡ ವಿವರಗಳು ಅವರಿಗೆ ನೀಡಬೇಕಾದ ವಿಶೇಷ ಸೌಲಭ್ಯಗಳ ಕುರಿತು ಆಲೋಚಿಸಲು ನೆರವಾಗುತ್ತವೆ ಎಂಬುದು ಸಮಿತಿಯ ಅಭಿಪ್ರಾಯ.

2) ಔದ್ಯೋಗಿಕ ಸಂಬಂಧಿತ ವಿವರ: ಉದ್ಯೋಗ ಹೊಂದುವುದರ ಮೂಲಕ ಇಂದು ನಾವೆಲ್ಲರು ಆರ್ಥಿಕವಾಗಿ ಸ್ವತಂತ್ರರಾಗಿದ್ದೇವೆ. ಅದಾಗ್ಯೂ, ಕಛೇರಿಯಲ್ಲಿ ಕೆಲವು ಕಾರಣಗಳಿಂದ ಇತರೆ ಸಹೋದ್ಯೋಗಿಗಳಂತೆ ಕಾರ್ಯನಿರ್ವಹಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿರುತ್ತೇವೆ ಎನ್ನುವ ಭಾವನೆ ಹಲವರಿಂದ ವ್ಯಕ್ತವಾಗಿವೆ. ಕೆಲವು ಅಂಶಗಳನ್ನು ಅವಲೋಕಿಸಿದಾಗ ಸಮಿತಿಗೆ ಸತ್ಯ ಮನವರಿಕೆಯಾಗಿದೆ.

ಕಛೇರಿಯಲ್ಲಿ ಲಭ್ಯವಿರುವ ಸೌಲಭ್ಯಗಳು, ಮೇಲಾಧಿಕಾರಿಗಳಿಗೆ ನಮ್ಮ ಕೆಲಸದ ಬಗ್ಗೆ ಇರುವ ತಿಳುವಳಿಕೆ, ಪಡೆದುಕೊಂಡ ವೃತ್ತಿ ಬುನಾದಿ ತರಬೇತಿ, ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ತರಬೇತಿ, ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಂಡುಕೊಂಡ ಪರಿಹಾರೋಪಾಯಗಳು, ಸಿಬ್ಬಂದಿಯ ಸಹಕಾರ, ಅಂಧ-ಅಂಗವಿಕಲ ಸ್ನೇಹಿ ಕಟ್ಟಡದ ವಿನ್ಯಾಸ, ಕಂಪ್ಯೂಟರ್ ಮತ್ತು ಅಂಧಸ್ನೇಹಿ ತಂತ್ರಾಂಶಗಳು, ಸರ್ಕಾರಿ ಮಹಿಳಾ ನೌಕರರಿಗಿರುವ ಮಾತೃತ್ವ ರಜೆ, ಹೆರಿಗೆ ಭತ್ಯೆ, ಕಛೇರಿಯಲ್ಲಿ ಶೌಚಾಲಯದ ವ್ಯವಸ್ಥೆ ಹಾಗೂ ಕಾರ್ಯನಿರ್ವಹಿಸಲು ಪೂರಕವಾದ ವಾತಾವರಣದ ಲಭ್ಯತೆ, ಇವೇ ಮುಂತಾದ ಅಂಶಗಳಿಂದ ಸಮಸ್ಯೆ ಇರುವುದರ ಕುರಿತು ಖಾತ್ರಿಪಡಿಸಿಕೊಳ್ಳಲಾಗಿದೆ.

ನಮ್ಮ ಅಂಧ ಮಹಿಳಾ ನೌಕರರು ಪ್ರಶ್ನೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಕೆಲವು ಗಂಭೀರ ಅಂಶಗಳನ್ನು ಸಮಿತಿಯ ಗಮನಕ್ಕೆ ತಂದಿರುತ್ತಾರೆ. ಉದ್ಯೋಗಕ್ಕೆ ಸಂಭಂಧಿಸಿದಂತೆ ಯಾವುದೇ ತರಬೇತಿಯಾಗಲಿ ಕಂಪ್ಯೂಟರ್ಹಾಗೂ ಅಂಧಸ್ನೇಹಿ ತಂತ್ರಾಂಶಗಳನ್ನಾಗಲಿ, ಕಛೇರಿಯಲ್ಲಿ ಕನಿಷ್ಠ ಸೌಲಭ್ಯಗಳಾದ ಕುರ್ಚಿ ಟೇಬಲ್ಗಳನ್ನು ಸಹ ನೀಡಿಲ್ಲವೆಂಬ ಅಂಶಗಳು ಬೆಳಕಿಗೆ ಬಂದಿರುತ್ತವೆ.

ಹಲವು ಸಮಸ್ಯೆಗಳ ನಡುವೆಯೂ ಕೆಲವು ಅಂಧ ಮಹಿಳಾ ನೌಕರರು ಅದ್ಭುತ ಸಾಧನೆ ಮಾಡಿ ಪ್ರಶಸ್ತಿಗೆ ಭಾಜನರಾಗಿರುವುದು ಗಮನಾರ್ಹ ಸಂಗತಿ.

3) ಆರ್ಥಿಕ ಸಬಲೀಕರಣ: ಉದ್ಯೋಗ ಹೊಂದಿ ಆರ್ಥಿಕವಾಗಿ ಸ್ವತಂತ್ರರಾಗಿದ್ದೇವೆ. ಆದರೆ, ಸಂಪೂರ್ಣ ಆರ್ಥಿಕ ಸಬಲೀಕರಣ ಇಂದಿಗೂ ಮರೀಚಿಕೆಯಾಗಿದೆ. ಆರ್ಥಿಕವಾಗಿ ಮುಂದುವರೆಯಲು ನಮ್ಮ ಮಹಿಳೆಯರಲ್ಲಿರುವ ವಿಶೇಷ ಆಲೋಚನೆಗಳನ್ನು ತಿಳಿದುಕೊಳ್ಳಲು ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

. ಆರ್ಥಿಕ ಸಶಕ್ತಿಕರಣಕ್ಕಾಗಿ ಸರ್ಕಾರದ ಯಾವುದಾದರು ವಿಶೇಷ ಯೋಜನೆಗಳ ಕುರಿತು ಇತರೆ ಮಹಿಳಾ ಸದಸ್ಯರಿಗೆ ಮಾಹಿತಿ ನೀಡುವುದಿದ್ದರೆ ತಿಳಿಸಿರಿ.

. ಆರ್ಥಿಕ ಸಬಲೀಕರಣಕ್ಕಾಗಿ ನಿಮ್ಮಲ್ಲಿ ಯಾವುದಾದರು ವಿಶೇಷ ಆಲೋಚನೆಗಳಿದ್ದರೆ ತಿಳಿಸಬಹುದು.

ಮೇಲಿನ 2 ಪ್ರಶ್ನೆಗಳಿಗೆ ನೌಕರರು ಸಕಾರಾತ್ಮಕವಾಗಿ ಸ್ಪಂದಿಸಿದರಲ್ಲದೆ, ಕೆಲವು ಸಮಯೋಚಿತ ಸಲಹೆಗಳನ್ನು ನೀಡಿರುತ್ತಾರೆ. ಮೊದಲನೆ ಪ್ರಶ್ನೆಗೆ ಸಂಬಂಧಿಸಿದಂತೆ ಅಂಗವಿಕಲ ಮಹಿಳೆಯನ್ನು ಅಂಗವಿಕಲರಲ್ಲದ ವ್ಯಕ್ತಿ ಮದುವೆಯಾದರೆ ಸರ್ಕಾರದಿಂದ ನೀಡುವ ಧನಸಹಾಯ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಜೀವ ವಿಮಾ ಯೋಜನೆ, ಅಂಚೆ ಕಛೇರಿಯಲ್ಲಿರುವ ಹಣ ಉಳಿತಾಯ ಯೋಜನೆ ಇವೇ ಮೊದಲಾದವುಗಳ ಕುರಿತು ಮಾಹಿತಿ ನೀಡಿರುತ್ತಾರೆ. ಆದರೆ, ಎಲ್ಲಾ ಸೌಲಭ್ಯಗಳು ಎಲ್ಲರಿಗು ಲಭ್ಯವಿರುವ ಸೌಲಭ್ಯಗಳಾಗಿದ್ದು, ಅಂಧ ಮಹಿಳೆಯರಿಗಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ಕೊರತೆ ಇರುವುದು ಕಂಡು ಬಂದಿರುತ್ತದೆ.

2ನೇ ಪ್ರಶ್ನೆಗೆ ಸ್ವಸಹಾಯ ಸಂಘದ ಸ್ಥಾಪನೆ, ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡುವುದು, ಗೃಹ ಕೈಗಾರಿಕೆ-ಗುಡಿ ಕೈಗಾರಿಕೆ ಮುಂತಾದವುಗಳಿಂದ ಆರ್ಥಿಕ ಸಬಲೀಕರಣವನ್ನು ಸಾಧಿಸುವ ಇಂಗಿತವನ್ನು ವ್ಯಕ್ತಪಡಿಸಿರುತ್ತಾರೆ.

(4) ವೈವಾಹಿಕ ಜೀವನದ ಮತ್ತು ಅವಲಂಬಿತರ ವಿವರಗಳು: ವಿವಾಹ ಎಂಬುದು ಎಲ್ಲರ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಸಮಿಕ್ಷೆಯಲ್ಲಿ ಭಾಗವಹಿಸಿದ 64 ಮಹಿಳೆಯರ ಪೈಕಿ 25 ಮಹಿಳೆಯರು ವಿವಾಹಿತರು ಮತ್ತು 39 ಮಹಿಳೆಯರು ಅವಿವಾಹಿತರು. ನಮ್ಮ ಅಂಧ ಮಹಿಳೆಯರು ಸಹ ಸಾಮಾನ್ಯ ಮಹಿಳೆಯರಂತೆ ವಿವಾಹವಾಗಿ ಕೌಟುಂಬಿಕ ಜವಾಬ್ದಾರಿಗಳನ್ನು ಹಾಗು ಕಛೇರಿಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವರೆಂದು ತಿಳಿಸಲು ಸಂತಸವಾಗುತ್ತದೆ. ಎಲ್ಲಾ ಸಾಮಾನ್ಯ ಮಹಿಳೆಯರಂತೆ ನಮ್ಮ ಅಂಧ ಮಹಿಳೆಯರು ಕೂಡಾ ವೈವಾಹಿಕ ಜೀವನದಲ್ಲಿ ಪತಿ ಪತ್ನಿಯರ ನಡುವೆ ವೈಮನಸ್ಸು, ಪತಿ ಪತ್ನಿ ಪ್ರತ್ಯೇಕ ವಾಸ, ವಿಚ್ಛೆದನದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವರೆಂದು ತಿಳಿಸಲು ಸಮಿತಿಯು ವಿಶಾದಿಸುತ್ತದೆ. ಅಲ್ಲದೆ ಕೆಲವು ಮಹಿಳೆಯರು ಪತಿಯನ್ನು ಕಳೆದುಕೊಂಡು ಹಲವು ಸವಾಲುಗಳನ್ನು ಎದುರಿಸುತ್ತ ಜೀವನ ನಡೆಸುತ್ತಿರುವುದು ತಿಳಿದು ಬಂದಿದೆ.

(5) ಸ್ವಯಂ ರಕ್ಷಣಾ ತಂತ್ರಗಳು: ಮಹಿಳೆಯರ ಸುರಕ್ಷತೆಯ ಕುರಿತು ಜಗತ್ತು ಗಮನಹರಿಸಿರುವುದರ ಜೊತೆಗೆ ಅಂಧ ಮಹಿಳೆಯರ ಸುರಕ್ಷತೆಯ ಕುರಿತು ಇಡೀ ಸಮಾಜವೇ ಚಿಂತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಮ್ಮೆಲ್ಲರಿಗು ತಿಳಿದ ಸಂಗತಿ. ಅಂಧ ಮಹಿಳೆಯರ ಸುರಕ್ಷತೆಯು ಅತ್ಯಂತ ಗಂಭೀರ ಮತ್ತು ಪ್ರಥಮ ಆಧ್ಯತೆಯನ್ನು ನೀಡಬೇಕಾದ ವಿಚಾರ ಎಂಬುದನ್ನು ಮನಗಂಡ ಸಮಿತಿಯ ಸದಸ್ಯರು ಕೆಳಗಿನ ಪ್ರಶ್ನೆಗಳ ಮೂಲಕ ಮಹಿಳೆಯರು ಅಳವಡಿಸಿಕೊಂಡಿರುವ ಸುರಕ್ಷತಾ ತಂತ್ರಗಳನ್ನು ತಿಳಿದುಕೊಂಡು ತನ್ಮೂಲಕ ಇತರೆ ಮಹಿಳೆಯರಿಗೆ ತಿಳಿಸಲು ಯೋಚಿಸಿರುತ್ತಾರೆ.

. ಅಂಧ ಮಹಿಳೆ ಕಛೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವರಕ್ಷಣೆಗೆ ಯಾವೆಲ್ಲಾ ತಂತ್ರಗಳನ್ನು ಅನುಸರಿಸಬಹುದು? ಪ್ರಶ್ನೆಗೆ ಬಿಳಿಕೋಲಿನ ಬಳಕೆ, ಫೋಲ್ಡಿಂಗ್ ಚಾಕುವಿನ ಬಳಕೆ, ಬ್ರೈಲ್ಲಿಪಿಗೆ ಬಳಸುವ ಸ್ಟೈಲಸ್ ಹಾಗೂ ಸೇಫ್ಟಿ ಪಿನ್ ಬಳಕೆ, ಉತ್ತಮ ಸಂವಹನ ಕಲೆ, ಮಹಿಳಾ ಸಹಾಯವಾಣಿ ಸಂಖ್ಯೆಗಳನ್ನು ಹೊಂದುವುದು ಕಡ್ಡಾಯವೆಂದು ತಿಳಿಸಿರುತ್ತಾರೆ. ಆಧುನಿಕ ತಂತ್ರಜ್ಞಾನದ ಕೊಡುಗೆಗಳಾದ Eyed Pro, Smart Cane, Google Map ಮತ್ತು ಮೊದಲಾದ ಸಹಾಯಕ ತಂತ್ರೋಪಕರಣಗಳ ಮೂಲಕ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಡುತ್ತಾರೆ.

. ಸ್ವರಕ್ಷಣೆಗೆ ಸಂಬಂಧಿಸಿದಂತೆ ಕಾರ್ಯಗಾರವನ್ನು ಏರ್ಪಡಿಸಿದರೆ ತಾವು ಪಾಲ್ಗೊಳ್ಳುವ ಇಚ್ಛೆ ಇದೆಯೇ? ಪ್ರಶ್ನೆಗೆ ಬಹುತೇಕ ಮಹಿಳೆಯರು ಉತ್ಸಾಹದಿಂದ ಉತ್ತರಿಸಿದರಲ್ಲದೆ, ಭವಿಷ್ಯದ ದಿನಗಳಲ್ಲಿ ಆಯೋಜಿಸುವ ಕಾರ್ಯಾಗಾರದಲ್ಲಿ ಭಾಗವಹಿಸುವ ಆಶಯವನ್ನು ವ್ಯಕ್ತಪಡಿಸಿರುತ್ತಾರೆ.

(6) ಚಲನವಲನ ತರಬೇತಿ ಮತ್ತು ಸಾರಿಗೆ ವ್ಯವಸ್ಥೆ ಕುರಿತು: ಸಮಸ್ತ ಅಂಧರು ಕಛೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿರಾತಂಕವಾಗಿ ಸ್ವತಂತ್ರವಾಗಿ ಓಡಾಡುವಲ್ಲಿ ಚಲನವಲನ ತರಬೇತಿಯು ಅತ್ಯಂತ ಸಹಕಾರಿಯಾಗುತ್ತದೆ. ಸಮಿಕ್ಷೆಗೆ ಒಳಪಟ್ಟ 64 ಮಹಿಳೆಯರಲ್ಲಿ 37 ಮಹಿಳೆಯರು ಚಲನವಲನ ತರಬೇತಿ ಪಡೆದುಕೊಂಡಿದ್ದು, ಉಳಿದ 27 ಮಹಿಳೆಯರು ಇನ್ನು ಚಲನವಲನ ತರಬೇತಿ ಪಡೆದುಕೊಂಡಿರುವುದಿಲ್ಲ. ಮಧ್ಯಂತರ ಅಂಧತ್ವ ಹಾಗೂ ಮಾಹಿತಿಯ ಕೊರತೆ ಕಾರಣವಾಗಿದೆ. ಮುಂದುವರೆದು ಚಲನವಲನ ತರಬೇತಿಯಲ್ಲಿ ತಿಳಿಸಿದ ಎಲ್ಲಾ ತಂತ್ರಗಳನ್ನು ಅಳವಡಿಸಿಕೊಂಡು ಅನುಸರಿಸಲು ಸಾಧ್ಯವಾಗುತ್ತಿಲ್ಲ. ಕಾರಣ ರಸ್ತೆಗಳು ಸುವ್ಯವಸ್ಥಿತವಾಗಿಲ್ಲದಿರುವುದು, ಕಾಲುದಾರಿ ಹಾಗೂ ರಸ್ತೆ ವ್ಯತ್ಯಾಸವನ್ನು ಗುರುತಿಸಿಕೊಳ್ಳಲು ಕಷ್ಟವಾಗಿರುವುದು, ರಸ್ತೆಗಳು ಗುಂಡಿಗಳಿಂದ ಕೂಡಿರುವುದು, ಅತಿಯಾದ ವಾಹನಗಳ ದಟ್ಟನೆ, ಚಾಲನಾ ಪರವಾನಗಿಯನ್ನು ನೀಡುವಾಗ ಅಂಧರು ಪಡೆಯುವ ಚಲನವಲನ ತಂತ್ರಗಳ ಕುರಿತು ಚಾಲಕರಿಗೆ ಮಾಹಿತಿ ನೀಡದಿರುವ ಸಾರಿಗೆ ಇಲಾಖೆಯ ಕಡೆಗಣನೆ, ಹಾಗೂ ನಿಯಮ ಬಾಹಿರ ಸಂಗತಿಯಿಂದ ತೊಡಕಾಗಿರುವ ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅಂಧ ಮಹಿಳೆಯರು ನಿರಾತಂಕವಾಗಿ ಸ್ವತಂತ್ರವಾಗಿ ಓಡಾಡಲು ಕೆಲವು ಸುಧಾರಣೆಗಳನ್ನು ಸೂಚಿಸಿರುತ್ತಾರೆ.

ಚಲನವಲನ ತರಬೇತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ರಸ್ತೆಗಳು ಮತ್ತು ಕಾಲುದಾರಿಗಳು ಸುವ್ಯವಸ್ಥಿತವಾಗಿ ನಿರ್ಮಾಣವಾಗಬೇಕು, ರಸ್ತೆಗಳು ಗುಂಡಿ ಹಾಗು ವಾಹನ ನಿಲುಗಡೆಯ ಸ್ಥಳದಿಂದ ಮುಕ್ತವಾಗಿರಬೇಕು, ಬಸ್ಸಿನಲ್ಲಿ ಅಂಗವಿಕಲರಿಗೆಂದೆ ಮೀಸಲಾದ ಆಸನವು ಅಂಧರು ಪತ್ತೆ ಹಚ್ಚುವಂತೆ ವಿನ್ಯಾಸವಾಗಬೇಕು, ಪ್ರತಿ ಬಸ್ ನಿಲ್ದಾಣ ತಲುಪಿದಾಗ ನಿಲ್ದಾಣದ ಹೆಸರನ್ನು ಹೇಳಲು GPS ಅಳವಡಿಸುವುದು ಇವೇ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿರುತ್ತಾರೆ.

(7) ಸಾಮಾಜಿಕ ಜಾಲತಾಣಗಳು: ಇಂದು ಸಾಮಾಜಿಕ ಜಾಲತಾಣಗಳು ವ್ಯಕ್ತಿಗಳ ನಡುವೆ ಪರಸ್ಪರ ಭಾಂಧವ್ಯ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ದಿಶೆಯಲ್ಲಿ ನಮ್ಮ ಅಂಧ ಮಹಿಳೆಯರಿಗೆ ಮಾಹಿತಿ ನೀಡಲು ಮತ್ತು ಅವರೊಂದಿಗೆ ಸಂವಹನ ನಡೆಸಲು ಸೂಕ್ತವಾದ ಸಾಮಾಜಿಕ ಜಾಲತಾಣ ಯಾವುದು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಲಾಗಿತ್ತು. 53 ಮಹಿಳಾ ನೌಕರರು ವಾಟ್ಸ್ಯಾಪ್ ಬಳಸುತ್ತಿದ್ದು, ಹೀಗಾಗಿ ಅವರೊಂದಿಗೆ ಸಂವಹನ ಸುಲಭ ಸಾಧ್ಯವಾಗಿದೆ. ಸಂಘದ ಚಟುವಟಿಕೆಗಳನ್ನು ಆಗಿಂದಾಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ. ಸಾಮಾಜಿಕ ತಂತ್ರಾಂಶಗಳನ್ನು ಹೊಂದಿಲ್ಲದ ಮಹಿಳೆಯರು ಸಾಮಾಜಿಕ ತಂತ್ರಾಂಶವನ್ನು ಹೊಂದಿರುವವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

8) ಹವ್ಯಾಸಗಳು: ಅಂಧ ಮಹಿಳಾ ನೌಕರರಲ್ಲಿರುವ ಹವ್ಯಾಸಗಳನ್ನು ಗುರುತಿಸಿ ಅವರನ್ನು ಏಳಿಗೆಯ ಪಥಕ್ಕೆ ಏರಲು ಪ್ರೋತ್ಸಾಹ ನೀಡಿ ತನ್ಮೂಲಕ ವಿಶೇಷ ಸಂದರ್ಭಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಆಲೋಚಿಸಲಾಗಿರುತ್ತದೆ. ಕ್ರೀಡೆ, ಹಾಡುಗಾರಿಕೆ, ಕಾವ್ಯಗಳ ರಚನೆ, ಅನುಕರಣೆಯಂತಹ ವಿಶೇಷ ಪ್ರತಿಭೆ ಅಂಧ ಮಹಿಳೆಯರಲ್ಲಿ ಇರುವುದು ಸಮೀಕ್ಷೆಯಿಂದ ಕಂಡುಬಂದಿದೆ.

(9) ಮಹಿಳಾ ಸಬಲೀಕರಣ: ಮಹಿಳಾ ಸಬಲೀಕರಣ ಎಂಬುದು ಇಂದು ಸಮನ್ವಯತೆ ಹಾಗೂ ತಿಳಿಗಂಪಿನ ಸ್ವರೂಪದ ವಿಚಾರವಾಗಿದೆ. ಸಮಾಜವು ಎಲ್ಲಾ ಮಹಿಳೆಯರ ಸಬಲೀಕರಣಕ್ಕೂ ಒತ್ತು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅಂಧ ಮಹಿಳೆಯರ ಸಬಲೀಕರಣಕ್ಕೆ ಅಂಧ ಮಹಿಳೆಯರೆ ಮುಂಚುಣಿಯಲ್ಲಿರಬೇಕಾದ ಅನಿವಾರ್ಯತೆ ಇದೆ. ನಿಟ್ಟಿನಲ್ಲಿ ಸಮಿತಿಯು ಮಹಿಳಾ ಸಬಲೀಕರಣಕ್ಕಾಗಿ ಅಂಧ ಮಹಿಳೆಯರು ಬಯಸುವಂತಹ ವಿಶೇಷ ಕಾರ್ಯಕ್ರಮಗಳು ಯಾವುವೆಂದು ಸಮಿಕ್ಷೆಯ ಮೂಲಕ ನೇರವಾಗಿ ಪ್ರಶ್ನಿಸಿದಾಗ, ಅಭಿಪ್ರಾಯಗಳು ಮೂಡಿ ಬಂದಿರುತ್ತವೆ. ಮನೆಯ ನಿರ್ವಹಣೆ, ಅಡುಗೆ ತಯಾರಿಕೆ, ಕಂಪ್ಯೂಟರ್ ತರಬೇತಿ, Android Phone ಬಳಕೆ, ಅಂಧ ಮಹಿಳೆಯರ ಕರ್ತವ್ಯಗಳು-ಹಕ್ಕುಗಳು-ಕಾನೂನುಗಳು ಇವೇ ಮೊದಲಾದ ವಿಚಾರಗಳ ಕುರಿತು ಕಾರ್ಯಗಾರ ಆಯೋಜಿಸಬೇಕೆಂದು ತಿಳಿಸಿರುತ್ತಾರೆ. ನುರಿತ ವೈದ್ಯರಿಂದ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು, ಅಂಗವಿಕಲ ಹಕ್ಕುಗಳ ಅಧಿನಿಯಮ-216 ಅನ್ವಯ ಅಂಧ ಮಹಿಳೆಯರಿಗಿರುವ ವಿಶೇಷ ಸವಲತ್ತುಗಳು, ಕೇಶಾಲಂಕಾರ, ಮೇಕಪ್ ಹಾಗೂ ಆರ್ಥಿಕ ಸಬಲೀಕರಣಕ್ಕೆಂದು ಇರುವ ಯೋಜನೆಗಳ ವೈವಿಧ್ಯಮಯ ಕಾರ್ಯಗಾರ ಹಾಗೂ ಕಾರ್ಯಕ್ರಮಗಳ ಆಯೋಜಿಸಬೇಕೆಂದು ತಿಳಿಸಿರುತ್ತಾರೆ. ಆಯೋಜಿಸಿದ್ದಲ್ಲಿ ಖಂಡಿತವಾಗಿಯೂ ಮಹತ್ವದ ಹೆಜ್ಜೆಯನ್ನಿಡುವ ಭರವಸೆಯನ್ನು ಹೊಂದಿರುತ್ತಾರೆ.

        ಪರಿವಿಡಿ

 


ಅಧ್ಯಾಯ-3. ಶಿಫಾರಸ್ಸು ಮತ್ತು ಉಪಸಂಹಾರ.

3.1. ಶಿಫಾರಸ್ಸುಗಳು:

(1) ಆನ್ಲೈನ್ ಸ್ವರೂಪ ಮತ್ತು ಪ್ರಾಯೋಗಿಕ ಸ್ವರೂಪದ ಮೂಲಕ ಚಲನವಲನ ತರಬೇತಿ, ಕಂಪ್ಯೂಟರ್ ತರಬೇತಿ ಹಾಗು Android Phone ಬಳಕೆಯ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಿ ಅಂಧ ಮಹಿಳೆಯರ ಸಭಲೀಕರಣದತ್ತ ಪ್ರಥಮ ಮತ್ತು ಅತಿ ಮಹತ್ವದ ಹೆಜ್ಜೆಯನ್ನಿಡಬೇಕೆಂದು ಸಮಿತಿಯು ಶಿಫಾರಸ್ಸು ಮಾಡುತ್ತದೆ.

(2) ಇಲಾಖಾನುಸಾರ ಹುದ್ದೆಗೆ ಪೂರಕವಾದ ತರಬೇತಿಯನ್ನು ಆಯೋಜಿಸಬೇಕು, ಕಛೇರಿಯಲ್ಲಿ ಕಾರ್ಯನಿರ್ವಹಿಸಲು ಲಭ್ಯವಿರುವ ಸಹಾಯಕ ತಂತ್ರಾಂಶ ಹಾಗೂ ತಂತ್ರೋಪಕರಣಗಳನ್ನು ಒದಗಿಸಬೇಕು ಮತ್ತು ಮೇಲಾಧಿಕಾರಿಗಳಿಗೆ ಸಂಘಟನೆಯ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

(3) ಅಂಧ ಮಹಿಳಾ ನೌಕರರಿಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅದರಲ್ಲೂ ಹೆರಿಗೆಯಾದಾಗ ಮಾತೃತ್ವ ರಜೆಯನ್ನು 6 ತಿಂಗಳಿನಿಂದ 9 ತಿಂಗಳಿಗೆ ಹೆಚ್ಚಿಸುವಂತೆ ಆದೇಶವನ್ನು ಮಾಡಿಸಲು ಸಂಘಟನೆಯು ಸರ್ಕಾರದೊಂದಿಗೆ ಪತ್ರ ವ್ಯವಹಾರದ ಜೊತೆಗೆ ಮಾತುಕತೆಯ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವಲಂಭಿತರೂ ಕೂಡ ಅಂಗವಿಕಲರಿದ್ದರೆ ವಿಶೇಷ ಗಮನಹರಿಸಬೇಕು.

(4) ಆರ್ಥಿಕ ಸಬಲೀಕರಣ ಸಾಧಿಸಲು ವಿಶೇಷವಾಗಿ ಅಂಧ ಮಹಿಳಾ ನೌಕರರಿಗಿರುವ ಯೋಜನೆಗಳ ಕುರಿತು ಮಾಹಿತಿ ನೀಡುವ ಅವಶ್ಯಕತೆ ಇದ್ದು, ಇದಕ್ಕಾಗಿ ವಿಶೇಷ ಕಾರ್ಯಾಗಾರಗಳನ್ನು ಏರ್ಪಡಿಸಬೇಕು ಮತ್ತು ಬ್ಯಾಂಕ್ಗಳ ಮುಖ್ಯಸ್ಥರಿಗೆ ಬ್ಯಾಂಕ್ಸವಲತ್ತುಗಳನ್ನು ಪಡೆದುಕೊಳ್ಳಲು ಅಂಧರಿಗೆ ಆಗುತ್ತಿರುವ ತೊಡಕಿನ ಕುರಿತು ಗಮನಸೆಳೆಯಬೇಕು.

(5) ಸ್ವಯಂ ರಕ್ಷಣಾ ತಂತ್ರಗಳನ್ನು ವಿಶೇಷವಾಗಿ ಕರಾಟೆ ಕಲೆಯಲು ನಮ್ಮ ಮಹಿಳೆಯರು ಆಸಕ್ತಿ ತೋರಿಸಿದ್ದು, ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಬೇಕು.

(6) ಅಂಧ ಮಹಿಳೆಯರ ಹಕ್ಕುಗಳು ಕಾನೂನುಗಳು ಆರೋಗ್ಯ ಇತರೆ ಮಹತ್ವಪೂರ್ಣ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕೀರ್ಣಗಳನ್ನು ಆಯೋಜಿಸಿ ಮೂಲಕ ಸಬಲೀಕರಣ ಸಾಧಿಸಲು ಕ್ರಿಯಾತ್ಮಕ ಯೋಜನೆಯನ್ನು ಜಾರಿಗೊಳಿಸಬೇಕು.

(7) ಇಂದು ಅಂಧ ಮಹಿಳಾ ನೌಕರರು ಉದ್ಯೋಗವನ್ನು ಹೊಂದಿ ಆರ್ಥಿಕವಾಗಿ ಸ್ವತಂತ್ರರಾಗಿದ್ದು, ವೈವಾಹಿಕ ಜೀವನವನ್ನು ಹೊಂದುವುದರೊಂದಿಗೆ ಕೌಟುಂಬಿಕ ಜವಾಬ್ದಾರಿಗಳನ್ನು ಕೂಡ ನಿಭಾಯಿಸಲು ಸಮರ್ಥರಾಗಿರುತ್ತಾರೆ. ಹಿನ್ನೆಲೆಯಲ್ಲಿ ಸೂಕ್ತವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಸುಂದರವಾದ ವೈವಾಹಿಕ ಜೀವನ ನಡೆಸಲು ಸಂಘಟನೆಯು ವಧು-ವರ ಅನ್ವೇಷಣೆ ವೇದಿಕೆಯನ್ನು ಕಲ್ಪಿಸಬೇಕು.

(8) ಪತಿ ಪತ್ನಿಯರ ನಡುವಿನ ವೈಮನಸ್ಸು ಮತ್ತಿತರೆ ಕಾರಣಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸವಾಗಿರುವ ಮತ್ತು ವಿಚ್ಛೆದಿತ ಅಂಧ ಮಹಿಳಾ ನೌಕರರಿಗೆ ಕಾನೂನು ನೆರವಿನ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಲು ವಿಶೇಷ ಕಾರ್ಯಕ್ರಮಗಳ ಆಯೋಜನೆಯಾಗಬೇಕು.

(9) ವಿಧವಾ ನಿಧಿ ಅಥವಾ ತುರ್ತು ನಿಧಿಯನ್ನು ಸದರಿ ಸಂಘವು ಸ್ಥಾಪಿಸಬೇಕೆಂದು ಅಥವಾ ಜಾರಿಯಲ್ಲಿರುವ ಸೂಕ್ತ ಆರೋಗ್ಯ ವಿಮೆಗಳನ್ನು ಪರಿಶೀಲಿಸಿ ಅಂಧ ಸ್ನೇಹಿ ವ್ಯವಸ್ಥೆಯನ್ನು ರೂಪಿಸಲು ಒಪ್ಪುವ ವಿಮಾ ಸಂಸ್ಥೆಯ ವಿಮೆಯನ್ನು ಪರಿಚಯಿಸಬೇಕು.

(10) ಮಧ್ಯಂತರ ಅಂಧತ್ವಕ್ಕೆ ಒಳಗಾಗುವವರಿಗೆ ಮಾನಸಿಕ ಮತ್ತು ತಾಂತ್ರಿಕ ನೆಲೆಗಟ್ಟಿನಲ್ಲಿ ಬಲವರ್ಧಿಸುವ ಯೋಜನೆಗಳನ್ನು ಇತರೆ ಸಂಘಗಳ ಅಥವಾ ನುರಿತರ ಸಹಯೋಗದೊಂದಿಗೆ ಜಾರಿಗೊಳಿಸಬೇಕು ಅಥವಾ ಸರ್ಕಾರಕ್ಕೆ ಕುರಿತು ಮನವರಿಕೆ ಮಾಡಿಕೊಡಬೇಕು.

(11) ಪ್ರತಿಭೆಯನ್ನು ಹೊಂದಿರುವ ಅಂಧ ಮಹಿಳೆಯರನ್ನು ಗುರುತಿಸಿ ಪ್ರವೃತ್ತಿಯಲ್ಲೂ ಏಳಿಗೆ ಹೊಂದಲು ಸೂಕ್ತ ವೇದಿಕೆಯನ್ನು ಕಲ್ಪಿಸಬೇಕು.

(12) ಮೇಲೆ ಉಲ್ಲೇಖಿಸಿದ ಎಲ್ಲಾ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಸಂಘಟನೆಯು ನಿರ್ದಿಷ್ಟ ಮೊತ್ತವನ್ನು ಕಾಯಿದಿರಿಸಬೇಕೆಂದು ಸಮಿತಿಯು ಶಿಫಾರಸ್ಸು ಮಾಡುತ್ತದೆ.

        ಪರಿವಿಡಿ

 

3.2. ಉಪಸಂಹಾರ:

ಪ್ರಶ್ನಾವಳಿಗೆ ಅಂಧ ಮಹಿಳಾ ನೌಕರರು ನೀಡಿರುವ ಅನಿಸಿಕೆಗಳ ಕುರಿತು ಸುದೀರ್ಘವಾಗಿ ಮೇಲೆ ಚರ್ಚಿಸಲಾಗಿದೆ. ಒಟ್ಟಾರೆ ಸಮಿಕ್ಷೆಯಿಂದ ತಿಳಿದು ಬಂದಿರುವ ಅಂಶವೆಂದರೆ, ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗೂ ಸಾಮಾಜಿಕವಾಗಿ ಇತರೆ ನೌಕರರಂತೆ ಅಂಧ ಮಹಿಳಾ ನೌಕರರು ಸಹ ಪ್ರಗತಿ ಸಾಧಿಸಲು ಪ್ರಯತ್ನಿಸುತ್ತಿರುವುದು ಆಶಾದಾಯಕವಾಗಿದೆ. ಅದಾಗ್ಯೂ, ದಿಶೆಯಲ್ಲಿ ನಮ್ಮ ಮಹಿಳಾ ನೌಕರರ ಪ್ರಯತ್ನವಾಗಲಿ ಅಥವಾ ಪ್ರಗತಿಯಾಗಲಿ ನಿರಿಕ್ಷಿತಮಟ್ಟವನ್ನು ತಲುಪಿಲ್ಲವೆಂಬುದು ಸಮಿಕ್ಷೆಯಿಂದ ದೃಢಪಟ್ಟಿರುತ್ತದೆ. ಸಾಮಾಜಿಕ ಅಡೆತಡೆ, ತಾಂತ್ರಿಕ ಜ್ಞಾನದ ಕೊರತೆ, ಅಡೆತಡೆರಹಿತ ಪರಿಸರದ (barrier free environment) ನಿರ್ಮಾಣವಾಗದಿರುವುದು ಇವೆ ಮೊದಲಾದ ಕಾರಣಗಳಿಂದ ನಮ್ಮ ಪ್ರಗತಿಯು ಕುಂಠಿತವಾಗಿರುತ್ತದೆ. ಆರ್ಥಿಕವಾಗಿ, ಔದ್ಯೋಗಿಕವಾಗಿ ಹಾಗು ಸಾಮಾಜಿಕವಾಗಿ ಅಡೆತಡೆಗಳಿಂಧ ಮುಕ್ತವಾದ ಪರಿಸರದ ನಿರ್ಮಾಣದ ಜೊತೆಗೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಕಾರ್ಯಾಗಾರಗಳು ವಿಚಾರಸಂಕೀರ್ಣಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅಂಧ ಮಹಿಳಾ ನೌಕರರ ಸರ್ವತೋಮುಖ ಪ್ರಗತಿ ಸಾಧ್ಯ. ಬಹುಮುಖ್ಯವಾಗಿ ಅಂಧ ನೌಕರರನ್ನು ಕಛೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಹಜೀವಿಯಂತೆಯೇ ಘನತೆ ಗೌರವಗಳಿಂಧ ನಡೆಸಿಕೊಳ್ಳುವಂತಹ ವಾತಾವರಣದ ನಿರ್ಮಾನವಾಗಬೇಕಿದೆ. ನಿಟ್ಟಿನಲ್ಲಿ ಸಮಿತಿಯು ಸದಾ ಕಾರ್ಯೋನ್ಮುಖವಾಗುವುದು ಮತ್ತು ಕಾರ್ಯದಲ್ಲಿ ನಮ್ಮ ಸಂಘಟನೆಯು ಸದಾ ಸಹಕರಿಸುವುದೆಂದು ಸಮಿತಿಯು ಭರವಸೆಯನ್ನಿರಿಸಿಕೊಂಡಿರುತ್ತದೆ.

        * * *

        ಪರಿವಿಡಿ