ಅಂಧರ ಸಹಕಾರ ಸಂಘ

ಕರ್ನಾಟಕ ರಾಜ್ಯ ಸಹಕಾರ ಸಂಘದ ಸ್ಥಾಪನೆಯ ಹಿನ್ನೆಲೆ

ಅಂಧ ನೌಕರರು ಆರ್ಥಿಕ ಸಬಲೀಕರಣಕ್ಕಾಗಿ ಸಂಘಟಿತ ವೇದಿಕೆಯನ್ನು ರೂಪಿಸಿಕೊಳ್ಳಲು ದಿನಾಂಕ: ೧೫/೦೪/೨೦೧೮ರಂದು ಸಂಘದ ಸರ್ವ ಸದಸ್ಯರ ಪ್ರಥಮ ಸಭೆಯಲ್ಲಿ ನಿರ್ಣಯಿಸಿದಂತೆ “ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಹಕಾರ ಸಂಘ ಸ್ಥಾಪನೆಗಾಗಿ ಒಮ್ಮತ ಮೂಡಿತ್ತು. ಇದರಂತೆ ಈಗ ಸಹಕಾರ ಸ್ಥಾಪನೆಗಾಗಿ ಸಹಕಾರ ಇಲಾಖೆಯಿಂದ ಅನುಮತಿ ದೊರೆತಿದ್ದು, ಕೇಂದ್ರ ಸರ್ಕಾರದ-ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ, ನಿಗಮ-ಮಂಡಲಿಗಳ ಅನುಧಾನಿತ ಸಂಸ್ಥೆಗಳ ಅಂಧ ನೌಕರರು ಸಹಕಾರ ಸಂಘದ ಸದಸ್ಯರಾಗಬಹುದು. 1000 ಸದಸ್ಯರ ಅವಶ್ಯಕತೆ ಸಹಕಾರ ಸಂಘದ ಸ್ಥಾಪನೆಗೆ ಪೂರಕವಾಗಿರುವುದರಿಂದ, ಷೇರುಗಳನ್ನು ಮೂರು ತಿಂಗಳ ಒಳಗೆ ಖರೀದಿಸುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತರು ಪ್ರವರ್ತಕರನ್ನು ಸಂಪರ್ಕಿಸಬೇಕೆಂದು ಮನವಿ.
ರಾಜ್ಯದ ದೃಷ್ಟಿ ವಿಷೇಶ ಚೇತನರ ಬಹುದಿನದ ಕನಸು ಈಗ ನನಸಾಗುತ್ತಿದೆ. ಇದನ್ನು ನಮ್ಮೆಲ್ಲರ ಆರ್ಥಿಕ ಬದುಕಿನ ಹೊಸ ಅದ್ಯಾಯದ ಆರಂಭವೆಂದೇ ಹೇಳಬಹುದು. ಒಂದು ಶತಮಾನದ ಹಿಂದೆ ಏಷಿಯಾದಲ್ಲಿ ಮೊಟ್ಟಮೊದಲಬಾರಿಗೆ ಸಹಕಾರ ಚಳುವಳಿಗೆ ನಾಂದಿ ಹಾಡಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಈಗಾಗಲೆ ದೇಶದಲ್ಲಿ ಮೊದಲ ಅಂಧ ನೌಕರರ ಸಂಘವನ್ನು ಸ್ಥಾಪಿಸಿದ ಹೆಮ್ಮೆ ನಮಗಿದೆ. ಹೀಗೆ ಮೊದಲ ಅಂಧ ನೌಕರರ ಸಹಕಾರ ಸಂಗ ಸ್ಥಾಪನೆಯ ಮೂಲಕ ಮತ್ತೊಂದು ಹಿರಿಮೆಗೆ ಪಾತ್ರರಾಗೋಣ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ಈ ಸಹಕಾರ ಸಂಘದ ಕುರಿತಾಗಿ ಇರುವ ಗೊಂದಲಗಳನ್ನು ಪ್ರಶ್ನೋತ್ತರಗಳ ಮೂಲಕ ಪರಿಹರಿಸಿಕೊಳ್ಳೋಣ.

ಸಹಕಾರ ಸಂಘಕ್ಕೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೋತ್ತರಗಳು

ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳುವವರು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿಗೊಳಿಸಿ 12ನೇ ಪ್ರಶ್ನೆಯ ಉತ್ತರದಲ್ಲಿ ನಮೂದಿಸಿರುವ ದಾಖಲಾತಿಗಳನ್ನು ಲಗತ್ತಿಸಬೇಕು.
karnataka co-operative society membership form
1. ಯಾರೆಲ್ಲ ಸಹಕಾರ ಸಂಘದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳಬಹುದು?
ಉ. ಕೆ.ಜಿ.ಐ.ಡಿ. ಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರು, ಕರ್ನಾಟಕ ರಾಜ್ಯ ಸರ್ಕಾರದಡಿ ಕಾರ್ಯ ನಿರ್ವಹಿಸುತ್ತಿರುವ ನಿಗಮ ಮಂಡಳಿಗಳ ಖಾಯಂ ಅಂಧ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ಖಾಯಂ ಅಂಧ ನೌಕರರು. ಇವರೊಟ್ಟಿಗೆ ಕೇಂದ್ರ ಸರ್ಕಾರದ ಇಲಾಖೆಗಳ, ನಿಗಮ ಮಂಡಳಿಗಳ, ಅನುದಾನಿತ ಸಂಘ ಸಂಸ್ಥೆಗಳ, ಸಾರ್ವಜನಿಕ ವಲಯದ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಅಂಧ ನೌಕರರು.
2. ಪ್ರಾಥಮಿಕ ಸದಸ್ಯತ್ವದ ಶುಲ್ಕವೆಷ್ಟು?
ಉ. 200ರೂ ಒಂದುಬಾರಿ ಮಾತ್ರ.
3. ಒಂದು ಷೇರಿನ ಮೊತ್ತವೆಷ್ಟು?
ಉ. ಒಂದು ಷೇರಿನ ಮೊತ್ತ 1000 ಮತ್ತು ಪ್ರತಿ ಷೇರಿಗು ಶೇ. 10 ರಷ್ಟು ಮೊತ್ತವನ್ನು ಶುಲ್ಕವಾಗಿ ಷೇರು ಮೊತ್ತದೊಂದಿಗೆ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳುವವರು ನೀಡತಕ್ಕದ್ದು.
4. ಒಬ್ಬ ಪ್ರಾಥಮಿಕ ಸದಸ್ಯ ಎಷ್ಟು ಷೇರುಗಳನ್ನು ಪಡೆಯಬಹುದು?
ಉ. ಒಬ್ಬ ಸದಸ್ಯ ಕನಿಷ್ಟ 2 ಷೇರುಗಳನ್ನು ಪಡೆಯಬೇಕು ಮತ್ತು ಗರಿಷ್ಟಕ್ಕೆ ಯಾವುದೇ ಮಿತಿ ಇರುವುದಿಲ್ಲ.
5. ಪ್ರಾಥಮಿಕ ಸದಸ್ಯತ್ವ ಪಡೆಯುವುದರಿಂದ ಮತ್ತು ಷೇರುಗಳನ್ನು ಖರಿದಿಸುವುದರಿಂದ ಆಗುವ ಲಾಭವೇನು?
ಉ. ಷೇರುದಾರರಿಗೆ ವಾರ್ಷಿಕವಾಗಿ ಪ್ರತಿ ಷೇರಿನ ಮೇಲೆ ನಿರ್ದೇಶಕ ಮಂಡಳಿಯು ನಿಗದಿಪಡಿಸಿದ ಡಿವಿಡೆಂಟನ್ನು (ಲಾಭಾಂಶ) ನೀಡಲಾಗುವುದು. ಸಾಲವನ್ನು ಪಡೆಯಬಹುದು. ಸಹಕಾರ ಸಂಘದ ಚುನಾವಣೆಯಲ್ಲಿ ಪಾಲ್ಗೊಳ್ಳುವ ಮತ್ತು ಸ್ಪರ್ಧಿಸುವ ಹಕ್ಕು ಇರುತ್ತದೆ. ಸಹಕಾರ ಸಂಘಕ್ಕೆ ಸಹ ಸದಸ್ಯತ್ವ ಪಡೆಯುವವರಿಗೆ ಅನುಮೋದನೆ ನೀಡಲು ಅವಕಾಶವಿರುತ್ತದೆ.
6. ಒಬ್ಬ ವ್ಯಕ್ತಿ ಎಷ್ಟು ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಬಹುದು?
ಉ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚಿನ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಬಹುದು, ಆದರೆ ಸಾಲ ಪಡೆಯುವ ಸಂದರ್ಭದಲ್ಲಿ ಸದಸ್ಯತ್ವವಿರುವ ಬೇರೆ ಸಂಘಗಳಿಂದ ಪಡೆದ ನಿರಾಕ್ಷೇಪಣಾ ಪತ್ರವನ್ನು ಸಲ್ಲಿಸಬೇಕು.
7. ಸಾಲಗಳಲ್ಲಿ ಎಷ್ಟು ವಿಧಗಳು?
ಉ. ದೀರ್ಘಾವಧಿ, ಅಲ್ಪಾವಧಿ ಸಾಲಗಳು ಹಾಗೂ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ಹೊರಡಿಸುವ ವಿವಿಧ ಬಗೆಯ ಸಾಲಗಳು.
8. ಸಹಕಾರ ಸಂಘಕ್ಕೆ ಎಷ್ಟು ಜನ ಸದಸ್ಯರಾಗಬಹುದು?
ಉ. ಕನಿಷ್ಟ ಒಂದು ಸಾವಿರ ಮತ್ತು ಗರಿಷ್ಟಕ್ಕೆ ಯಾವುದೇ ಮಿತಿ ಇರುವುದಿಲ್ಲ.

ಸಹ ಸದಸ್ಯತ್ವಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು

ಸಹ ಸದಸ್ಯರು ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿಗೊಳಿಸಿ 12ನೇ ಪ್ರಶ್ನೆಯ ಉತ್ತರದಲ್ಲಿ ನಮೂದಿಸಿರುವ ದಾಖಲಾತಿಗಳನ್ನು ಲಗತ್ತಿಸಬೇಕು.
KSECSB_CO-MEMBERSHIP_APPLICATION_FORM……………
9. ಯಾರು ಸಹಸದಸ್ಯರಾಗಬಹುದು? ಮತ್ತು ಸಹ ಸದಸ್ಯತ್ವ ಪಡೆಯುವುದರಿಂದ ಆಗುವ ಅನುಕೂಲವೇನು?
ಉ. ಪ್ರಾಥಮಿಕ ಸದಸ್ಯರಿಂದ ಅನುಮೋದಿಸಿ ಋಜು ಮಾಡಲ್ಪಟ್ಟವರು ಸಹ ಸದಸ್ಯರಾಗಬಹುದು. ಸಹ ಸದಸ್ಯತ್ವ ಪಡೆಯುವುದರಿಂದ ಸಾಲವನ್ನು ಪಡೆದುಕೊಳ್ಳಬಹುದು ಮತ್ತು ನಿರ್ದೇಶಕ ಮಂಡಲಿ ನಿಗದಿಪಡಿಸುವ ಲಾಭಾಂಶವನ್ನು ಪಡೆದುಕೊಳ್ಳುವರು.
10. ಸಹ ಸದಸ್ಯರು ಪಡೆದುಕೊಳ್ಳಬಹುದಾದ ಷೇರಿನ ಮೊತ್ತವೆಷ್ಟು?
ಉ. ಒಂದು ಷೇರಿನ ಮೊತ್ತ 1000 ಮತ್ತು ಪ್ರತಿ ಷೇರಿಗು ಶೇ. 10 ರಷ್ಟು ಮೊತ್ತವನ್ನು ಶುಲ್ಕವಾಗಿ ಷೇರು ಮೊತ್ತದೊಂದಿಗೆ ಸಹ ಸದಸ್ಯತ್ವವನ್ನು ಪಡೆದುಕೊಳ್ಳುವವರು ನೀಡತಕ್ಕದ್ದು. ಸಹ ಸದಸ್ಯತ್ವ ಪಡೆಯುವವರು ಕನಿಷ್ಟ ಒಂದು ಷೇರನ್ನು ಪಡೆಯಬೇಕು ಮತ್ತು ಗರಿಷ್ಟಕ್ಕೆ ಯಾವುದೇ ಮಿತಿ ಇರುವುದಿಲ್ಲ.
11. ಸಹ ಸದಸ್ಯತ್ವದ ಪ್ರವೇಶ ಶುಲ್ಕ ಎಷ್ಟು?
ಉ. ರೂ. 200 ಒಂದುಬಾರಿ ಮಾತ್ರ.
12. ಪ್ರಾಥಮಿಕ ಸದಸ್ಯತ್ವ ಹಾಗೂ ಸಹ ಸದಸ್ಯತ್ವ ಪಡೆಯಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು?
ಉ. ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಕಂಡ ದಾಖಲೆಗಳ ಪ್ರತಿಗಳನ್ನು ಸಲ್ಲಿಸತಕ್ಕದ್ದು:
(A) ನೂತನ ಸಂಬಳದ ಚೀಟಿ ಮತ್ತು ಖಚೇರಿಯ ಗುರುತಿನ ಕಾರ್ಡ್‌ ಇದ್ದಲ್ಲಿ ಸಲ್ಲಿಸತಕ್ಕದ್ದು.
(B) ಅಂಧತ್ವ ಪ್ರಮಾಣ ಪತ್ರ.
(C) ಆಧಾರ್‌ ಗುರುತಿನ ಚೀಟಿ.
(D) ರದ್ದುಗೊಳಿಸಿದ ಬ್ಯಾಂಕ್ ಚಕ್‌ ಅಥವಾ ಖಾತೆಯ ವಿವರವಿರುವ ಪಾಸ್ಬುಕ್ನ ಪ್ರತಿ.
(E) ಪಾನ್‌ ಕಾರ್ಡ್.
(‌F) ಮೂರು ಪಾಸ್ಪೋಟ್‌ ಅಳತೆಯ ಮತ್ತು ಒಂದು ಸ್ಟ್ಯಾಂಪ್‌ ಅಳತೆಯ ಭಾವ ಚಿತ್ರಗಳು.

* ಆಡಳಿತ ಮಂಡಳಿಯ ಪದಾಧಿಕಾರಿಗಳ ಮೊಬೈಲ್‌ ಸಂಖ್ಯೆಗಳು

ಒಟ್ಟು 15 ಪದಾಧಿಕಾರಿಗಳು ಸದರಿ ಸಹಕಾರ ಸಂಘದಲ್ಲಿದ್ದು, ಈ ಕುರಿತು ಮಾಹಿತಿ ಬೇಕಾಗಿದ್ದಲ್ಲಿ, ನೀವು ಒಬ್ಬರಿಗೆ ಪಠ್ಯ ಸಂದೇಶ ಕಳುಹಿಸಬಹುದಾಗಿದೆ.

ಮಂಜುನಾಥ್‌ ಬಿ.ಸಿ ರವರಿಗೆ ಪಠ್ಯ ಸಂದೇಶ ಕಳುಹಿಸಿ.
ಶಿವಾಜಿ ಮಾನೆ ರವರಿಗೆ ಪಠ್ಯ ಸಂದೇಶ ಕಳುಹಿಸಿ.
ಖಂಡೆಪ್ಪ ರವರಿಗೆ ಪಠ್ಯ ಸಂದೇಶ ಕಳುಹಿಸಿ.