ಸ್ಥಾಯಿ ಸಮಿತಿಗಳು

ಸ್ಥಾಯಿ ಸಮಿತಿಗಳ ರೂಪುರೇಷೆ

ಸ್ಥಾಯಿ ಸಮಿತಿಗಳ ಹೆಸರು ಮತ್ತು ಹೊಣೆಗಾರಿಕೆಗಳು:

 1. ನೀತಿ ನಿರುಪಣಾ ಸಮಿತಿ.

ವಿವರಣೆ: ಸರ್ಕಾರದೊಡನೆ, ಸಮ್ಯೋಜಿತ ಸಂಘ-ಸಂಸ್ಥೆಗಳೊಡನೆ ನಡೆಸಬಹುದಾದ ಪತ್ರ ವ್ಯವಹಾರಗಳು, ಕಾಯ್ದೆಗಳ ವಿಮರ್ಶೆ-ರೂಪುರೇಷೆ, ನ್ಯಾಯಾಲಯಗಳ ವ್ಯವಹರಣೆಗಳು ಈ ಸಮಿತಿಯ ಪ್ರಮುಖ ಅಂಶಗಳಾಗಿರುತ್ತವೆ.

 1. ಕೌಶಲ್ಯ ಸಂವರ್ಧನಾ, ತಂತ್ರಜ್ಞಾನ ಮತ್ತು ಸಂವಹನ ಸಮಿತಿ.

ವಿವರಣೆ ಅ: ಅಂಧ ನೌಕರರಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕಾರ್ಯಗಾರಗಳು ಮತ್ತು ದೃಷ್ಟಿ ಇರುವವರಲ್ಲಿ ಅಂಧ ಸಮುದಾಯದ ಏಳಿಗೆಗೆ ಪೂರಕವಾಗಿ ಸಂವೇದನಾಶೀಲವಾಗಿ ಸ್ಪಂದಿಸುವ ಸಕರಾತ್ಮಕ ಮನೋಭಾವವನ್ನು ಬೆಳೆಸುವುದಕ್ಕಾಗಿ ಕೈಗೊಳ್ಳುವ ಕಾರ್ಯಗಾರಗಳು ಈ ಸಮಿತಿಯ ಕಾರ್ಯವಾಗಿರುತ್ತದೆ.

ವಿವರಣೆ ಆ: ಸಂಘದ ಜಾಲತಾಣದ ವಿನ್ಯಾಸ-ನಿರ್ವಹಣೆ, ಸಾಮಾಜಿಕ ತಾಣಗಳ ನಿರ್ವಹಣೆ, ಸಂಘದ ಚಟುವಟಿಕೆಗಳನ್ನು ಸದಸ್ಯರಿಗೆ ಕಾಲಕಾಲಕ್ಕೆ ಅಗತ್ಯಾನುಸಾರ ತಿಳಿಸುವುದು ಇದರ ಕೆಲಸವಾಗಿರುತ್ತದೆ.

 1. ಮಹಿಳಾ ಆಧ್ಯತಾ ಸಮಿತಿ

ವಿವರಣೆ: ಒಟ್ಟಾರೆ ಅಂಧ ಮಹಿಳಾ ನೌಕರರ ಏಳಿಗೆಗೆ ಸಂಬಂಧಿಸಿದ ಎಲ್ಲಾ ಆಯಾಮಗಳ ಯೋಜನೆಗಳು-ನಿಯಮಗಳು-ಕಾರ‍್ಯಗಾರಗಳು ಈ ಸಮಿತಿಯ ವ್ಯಾಪ್ತಿಯಲ್ಲಿರುತ್ತವೆ.

 1. ಸಂಪನ್ಮೂಲ ಆಧಾರಿತ ಯೋಜನಾ ಸಮಿತಿ.

ವಿವರಣೆ: ಬೌದ್ಧಿಕ ಮತ್ತು ಭೌತಿಕ ಸಂಪನ್ಮೂಲಗಳ ಸಂಗ್ರಹಣೆಗೆ ಪೂರಕವಾಗಿ ಕೈಗೊಳ್ಳುವ ಎಲ್ಲಾ ರೀತಿಯ ಅಂಶಗಳು ಈ ಸಮಿತಿಗೆ ಸೇರಿರುತ್ತವೆ ಮತ್ತು ಸಂಘದ ಸರ್ವ ಸದಸ್ಯರ ಬೌದ್ಧಿಕ ಮತ್ತು ಜೀವನ ಗುಣಮಟ್ಟವನ್ನು ಹೆಚ್ಚಿಸಲು ರೂಪಿಸಬಹುದಾದ ಯೋಜನೆಗಳು ಈ ಸಮಿತಿಯ ವ್ಯಾಪ್ತಿಯಲ್ಲಿರುತ್ತವೆ.

 1. ಪ್ರತಿಭಾನ್ವೇಷಣೆ ಮತ್ತು ಕಾರ್ಯಕ್ರಮ ರೂಪುರೇಷೆ ಸಮಿತಿ.

ವಿವರಣೆ: ಸದಸ್ಯರಲ್ಲಿರುವ ಹವ್ಯಾಸಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ನಡೆಸುವುದು ಮತ್ತು ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯ ರೂಪುರೇಷೆಯನ್ನು ಸಿದ್ಧಪಡಿಸುವುದು ಇದರ ಕರ್ತವ್ಯವಾಗಿರುತ್ತದೆ.

 1. ಮನವಿ ಸ್ವೀಕಾರ ಮತ್ತು ಕುಂದುಕೊರತೆ ನಿವಾರಣಾ ಸಮಿತಿ.

ವಿವರಣೆ: ಅಧ್ಯಕ್ಷರಿಗೆ ಅಥವಾ ಪ್ರಧಾನ ಕಾರ್ಯದರ್ಶಿಯವರಿಗೆ ಅಥವಾ ವಿಭಾಗೀಯ ಐದು ನಿರ್ದೇಶಕರಿಗೆ ಅಥವಾ ಮಹಿಳಾ ಉಪ ಅಧ್ಯಕ್ಷರಿಗೆ ಅಂಧ ನೌಕರರು ಸಲ್ಲಿಸಿದ ಲಿಖಿತ ಮನವಿ ಕ್ಲಿಷ್ಟವಾಗಿದ್ದರೆ ಅಂತಹ ಪತ್ರಗಳನ್ನು ಪರಿಶೀಲಿಸಲಿಕ್ಕಾಗಿ ಈ ಸಮಿತಿಗೆ ಜವಬ್ದಾರಿಯನ್ನು ನೀಡಲಾಗಿರುತ್ತದೆ. ಸಮಿತಿಯು ಈ ಕುರಿತಂತೆ ಕೈಗೊಳ್ಳಬಹುದಾದ ಪರಿಹಾರೋಪಾಯವನ್ನು ಅಧ್ಯಕ್ಷರಿಗೆ ಅಥವಾ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಬೇಕು.

ಸಮಿತಿಗಳ ಸ್ವರೂಪ

 1. ಸಮಿತಿಯ ಶೀರ್ಷಿಕೆಗೆ ತಕ್ಕಂತೆ ಬಹುಮುಖಿ ಆಯಾಮದಲ್ಲಿ ಸಮಿತಿಗೆ ನಿಯೋಜಿತವಾದ ಮುಖ್ಯಸ್ಥರು ಮತ್ತು ಸದಸ್ಯರು ಕಾರ್ಯನಿರ್ವಹಿಸಬೇಕು. ಈಗಾಗಲೇ ತಿಳಿಸಿರುವ ವ್ಯಾಪ್ತಿಯಲ್ಲಿರುವ ಕೆಲಸಗಳಿಗೆ ಸಮಿತಿಗೆ ಯಾವುದೇ ಮಿತಿ ಇರುವುದಿಲ್ಲ.
 2. ಸಮಿತಿಯ ಮುಖ್ಯಸ್ಥರು ಸಮಿತಿಯ ಸದಸ್ಯರೊಡನೆ ಸೇರಿ ಸಂಶೋಧನೆ, ಅಭಿಪ್ರಾಯ ಸಂಗ್ರಹಣೆ, ಅಧ್ಯಯನದ ಮೂಲಕ ದತ್ತವಾಗುವ ಅಂಶಗಳನ್ನು ಒಳಗೊಂಡ ವರದಿಯನ್ನು ಕನಿಷ್ಟ ಎರಡು ತಿಂಗಳ ಒಳಗೆ ಕಾರ್ಯಕಾರಿ ಸಮಿತಿಗೆ ಸಲ್ಲಿಸಬೇಕು. ಕಾರ್ಯಕಾರಿ ಸದಸ್ಯರು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಲ್ಲಿಕೆಯಾದ ವರದಿಯನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಇದ್ದರೆ, ತಿದ್ದುಪಡಿಗೊಳಿಸಬೇಕು ಮತ್ತು ತಡಮಾಡದೆ ವರದಿಯ ಅಂಶಗಳನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಬೇಕು.
 3. ಸರ್ಕಾರ ಅಥವಾ ಸಮ್ಯೋಜಿತ ಸಂಘ ಅಥವಾ ಮಾಧ್ಯಮಗಳ ಗಮನಕ್ಕೆ ತರಬಯಸುವ ಅಂಶಗಳಿದ್ದರೆ, ಸಮಿತಿಯ ಮುಖ್ಯಸ್ಥರು ಸದಸ್ಯರ ಒಮ್ಮತದ ಮೇರೆಗೆ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರ ಹೆಸರಿನಲ್ಲಿ ಪತ್ರದ ಕರಡನ್ನು ಸಿದ್ಧಪಡಿಸಬೇಕು. ಹಾಗೆಯೇ, ಯಾರ ಹೆಸರಿನಲ್ಲಿ ಪತ್ರವಿರುತ್ತದೆಯೋ ಅವರಿಗೆ ಸಮಿತಿಯ ಮುಖ್ಯಸ್ಥರು ಪತ್ರವನ್ನು ನೀಡಬೇಕು. ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರು ಪಡೆದ ಪತ್ರವನ್ನು ಪರಿಶೀಲಿಸಿ, ವಿವೇಚನಾನುಸಾರ ಸಹಿಯೊಡನೆ ಔಚಿತ್ಯವಾಗಿ ಪತ್ರ ವ್ಯವಹಾರ ನಡೆಸಬೇಕು. ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿಯವರು ತಮಗೆ ಕಾರ್ಯಗಳ ಒತ್ತಡವಿದ್ದಾಗ ಮಾತ್ರ ಸೂಚಿಸಿದ ಸಂಘದ ಸದಸ್ಯ ಅಗತ್ಯಾನುಸಾರ ಸಹಿಯಾದ ಪತ್ರದ ಅನುಸರಣೆ ಮಾಡಬೇಕು.

ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆ ಮತ್ತು ಕೈಬಿಡುವುದು

ಈ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯು ಕಾರ್ಯಕಾರಿ ಸಮಿತಿಯ ಕಾಳಜಿಯಲ್ಲಿ ಇಲ್ಲಿ ತಿಳಿಸಿರುವಂತೆ ನಡೆಯಬೇಕು ಮತ್ತು ಸಮಿತಿಯನ್ನು ರಚಿಸಿದ ತರುವಾಯ ಸಮಿತಿಯಲ್ಲಿನ ಸದಸ್ಯನ ದುರ್ನಡತೆಯ ಆಧಾರದಲ್ಲಿ ಅಥವಾ ಕಾರ್ಯಕ್ಷಮತೆಯಲ್ಲಿ ನಿರೀಕ್ಷಿತ ಫಲಿತಾಂಶ ಕಂಡುಬಾರದಿದ್ದಲ್ಲಿ ಅಂತಹ ಸದಸ್ಯನನ್ನು ಕೈಬಿಟ್ಟು ಮತ್ತೊಬ್ಬರನ್ನು ಸೇರಿಸಿಕೊಳ್ಳುವ ಅಧಿಕಾರವನ್ನು ಕಾರ‍್ಯಕಾರಿ ಸಮಿತಿ ಹೊಂದಿರುತ್ತದೆ.

 1. ಸ್ಥಾಯಿ ಸಮಿತಿಯು ರಚನೆಗೊಂಡಂದಿನಿಂದ ಸಂಘದ ಮತ್ತೊಂದು ಚುನಾವಣೆ ನಡೆಯುವ ದಿನಾಂಕದವರೆಗೆ ಆರು ಸದಸ್ಯರನ್ನು ಒಳಗೊಂಡಿರುತ್ತದೆ.
 2. ಕಾರ್ಯಕಾರಿ ಸಮಿತಿಯ ಒಬ್ಬ ಸದಸ್ಯ ಸ್ಥಾಯಿ ಸಮಿತಿಯ ಮುಂದಾಳುವಾಗಿರಬೇಕು. ಅದಾಗ್ಯೂ, ಸಮಿತಿಯ ಮುಂದಾಳತ್ವದ ಸ್ಥಾನಕ್ಕೆ ಕಾರ್ಯಕಾರಿ ಸದಸ್ಯ ತನ್ನ ಬದಲು ಸದರಿ ಸ್ಥಾಯಿ ಸಮಿತಿಯ ಇನ್ನುಳಿದ ಸದಸ್ಯರಲ್ಲೊಬ್ಬರನ್ನು ಮುಂದಾಳುವನ್ನಾಗಿಸಬಹುದು.
 3. ರಾಜ್ಯ ಪರಿಷತ್ತಿನ ಇಬ್ಬರು, ಅದರಲ್ಲಿ ಒಬ್ಬರು ಸಂಸ್ಥಾಪಕ ಸದಸ್ಯರು ಅಥವಾ ಸಂಸ್ಥಾಪಕ ಸದಸ್ಯರಿಂದ ಸೂಚಿಸಲ್ಪಟ್ಟ ಸಂಘದ ಹೊರಗಿನ ಅಥವಾ ಒಳಗಿನ ವ್ಯಕ್ತಿ, ಮತ್ತೊಬ್ಬರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇರುತ್ತಾರೆ.
 4. ಈ ಮೂವರಿಂದ ಸೂಚಿಸಲ್ಪಡುವ ಒಬ್ಬ ಸಾಮಾನ್ಯ ಸದಸ್ಯ.
 5. ಈ ನಾಲ್ವರಿಂದ ಒಮ್ಮತದ ಮೇರೆಗೆ ಆಯ್ಕೆಗೊಳ್ಳುವ ಮತ್ತೊಬ್ಬ ಸಾಮಾನ್ಯ ಸದಸ್ಯ ಅಥವಾ ಸಮಿತಿಯ ಕಾರ್ಯಗಳಿಗೆ ಪೂರಕ ಅರಿವನ್ನು ಹೊಂದಿರುವ ಸಂಘದ ಹೊರಗಿನ ವ್ಯಕ್ತಿ.
 6. ಈ ಐದು ಸದಸ್ಯರಿಂದ ಆಯ್ಕೆಗೊಳ್ಳುವ ಅಥವಾ ಕಾರ್ಯಕಾರಿ ಸಮಿತಿ ಸೂಚಿಸುವ ಸೇವಾ ಮನೋಭಾವದ ವ್ಯಕ್ತಿ. ಸೇವಾ ಮನೋಭಾವದ ವ್ಯಕ್ತಿಗೆ ಸಾಮಾನ್ಯ ಲಿಪಿಯ ಸಂವಹನ ಕೌಶಲ್ಯವಿರಬೇಕು ಮತ್ತು ಕಂಪ್ಯೂಟರ‍್ ಮೂಲಕ ಕನ್ನಡ ಇಂಗ್ಲಿಷ್ ಬರೆಯುವ ಕೌಶಲ್ಯವನ್ನು ಹೊಂದಿರಲೇಬೇಕಾಗಿರುತ್ತದೆ.
 7. ಈ ಸ್ಥಾಯಿ ಸಮಿತಿಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡ್ಡಾಯವಾಗಿ ಇರತಕ್ಕದ್ದು.
 8. ಸಮಿತಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಿಸುವ ಮತ್ತು ಸದಸ್ಯರ ಸಂಖ್ಯೆಯನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಿಸುವ ನಿರ್ಧಾರವು ಕಾರ್ಯಕಾರಿ ಸಮಿತಿಯದ್ದಾಗಿರುತ್ತದೆ.

ವಿವಿಧ ಸಮಿತಿಗಳಲ್ಲಿನ ಸದಸ್ಯರ ಮಾಹಿತಿ

ನೀತಿ ನಿರೂಪಣಾ ಸಮಿತಿಯ ಸದಸ್ಯರು:

 

ಕ್ರ.ಸಂ ಹೆಸರು ವಿಭಾಗ ಹುದ್ದೆ ಮತ್ತು ಕಾರ್ಯ ಸ್ಥಳ mobile number ಷರಾ
1 ಕೇಶವಮೂರ್ತಿ ಕಾರ್ಯಕಾರಿ ಪದಾಧಿಕಾರಿ. ಕಿರಿಯ ಸಹಾಯಕರು, ಸಿಆಸುಇ (ಕಾರ್ಯಕಾರಿ), ಬಹುಮಹಡಿಗಳ ಕಟ್ಟಡ, ಬೆಂಗಳೂರು 8548951999  
2  ವೀರಕ್ಯಾತಯ್ಯ  ಸಂಸ್ಥಾಪಕ ಸದಸ್ಯರು, ಕಿರಿಯ ಸಹಾಯಕರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯಕಾರಿ, ವಿಧಾನಸೌಧ, ಬೆಂಗಳೂರು 9964100089  
3 ಮಂಜುನಾಥ ಬಿ.ಸಿ ಚಿಕ್ಕಬಳ್ಳಾಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯಲಯ, ಚಿಕ್ಕಬಳ್ಲಾಪುರ ತಾಲ್ಲೂಕು ಮತ್ತು ಜಿಲ್ಲೆ 9900449861  
4 ಬಸಯ್ಯಾ ಈರಯ್ಯ ಮಠಪತಿ ಸದಸ್ಯರು. ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿ, ಬೆಳಗಾವಿ 9902382953  
5 ಶೀಲಾ ಸದಸ್ಯರು. ಶಿಕ್ಷಕರು, ಮಾದರಿಯ ಪ್ರಾಥಮಿಕ ಪಾಠಶಾಲೆ, ಮುಧೋಳ್ B, ಔರಾದ್ B, ತಾಲ್ಲೂಕ್, ಬೀದರ್ ಜಿಲ್ಲೆ 8105657369  
6 ನಾಗಲಕ್ಷ್ಮಿ ಸದಸ್ಯರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ದೇವೀರಮ್ಮನ ಹಳ್ಳಿ ಗ್ರಾ.ಪಂ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. 7406853989  

 

 

ಕೌಶಲ್ಯ ಸಂವರ್ಧನಾ, ತಂತ್ರಜ್ಞಾನ ಮತ್ತು ಸಂವಹನ ಸಮಿತಿಯ ಸದಸ್ಯರು:

 

ಕ್ರ.ಸಂ ಹೆಸರು ವಿಭಾಗ ಹುದ್ದೆ ಮತ್ತು ಕಾರ್ಯ ಸ್ಥಳ mobile number ಷರಾ
1 ಶಿವಕುಮಾರ್ R C. ಕಾರ್ಯಕಾರಿ ಪದಾಧಿಕಾರಿ. ಪ್ರಥಮ ದರ್ಜೆ ಸಹಾಯಕರು, ಉಪ ಖಜಾನೆ, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ 9060720937  
2 ಆಶಾ K G ಕಾರ್ಯಕಾರಿ ಪದಾಧಿಕಾರಿ. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾ ಪಂಚಾಯತ್ ಕಾರ್ಯಲಯ, ವಾಸನ, ಹರಿಹರ ತಾಲ್ಲೂಕು, ದಾವಣಗೆರೆ ಜಿಲ್ಲೆ 8553272233  
3 ಮೋಹನ್ ಕುಮಾರ‍್ K N ಸದಸ್ಯರು.  proof press man, government braille press, mysore 9740511203 ಸಂಸ್ಥಾಪಕ ಸದಸ್ಯರಾದ ಪ್ರಶಾಂತ್ M N ರವರಿಂದ ಸೂಚಿಸಲ್ಪಟ್ಟಿರುತ್ತಾರೆ.
4 ಗಣೇಶ ಜಿ.ಎಸ್ ಮೈಸೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾ. ಪಂಚಾಯತಿ ಕಾರ್ಯಾಲಯ, ಕೂರ್ಗಳ್ಳಿ, ಮೈಸೂರು 9880946999  
5 ಸಿದ್ದೇಶ್ ಕೆ ಸದಸ್ಯರು. ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಜೇಂದ್ರಘಡ, ಗದಗ್ ಜಿಲ್ಲೆ. 9686018201  
6 ಪ್ರಿಯಾಂಕ ಸದಸ್ಯರು. ದ್ವಿತೀಯ ದರ್ಜೆ ಸಹಾಯಕರು, ಪ್ರಿನ್ಸಿಪಲ್ ಜೆಎಂಎಫ್‍ಸಿ ಕೋರ್ಟ್, ಹುಮನಾಬಾದ್, ಬೀದರ್ ಜಿಲ್ಲೆ 9538123730  
7 ಜಾಯಲ್ ಜೆ ಫರ್ನಾಂಡೀಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ಸಿವಿಲ್ ನ್ಯಾಯಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಆನೇಕಲ್, ಬೆಂಗಳೂರು 9591118403  
8 ಮಂಜು ಕೆ ಸದಸ್ಯರು. ದ್ವಿತೀಯ ದರ್ಜೆ ಸಹಾಯಕರು, ಸಿನೀಯರ್ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಬಿ.ಹೆಚ್. ರಸ್ತೆ, ಅರಸೀಕೆರೆ, ಹಾಸನ ಜಿಲ್ಲೆ. 9844401284  
9 ವಾಣಿ ಬಂಡೇಕರ್ ಸದಸ್ಯರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾ. ಪಂಚಾಯಿತಿ ಕಾರ್ಯಲಯ. ಕೈಲಾಂಚೆ, ರಾಮನಗರ ಜಿಲ್ಲೆ 7411803138  
10 ರಾಘವೇಂದ್ರ ಜನಿವಾರ್ ಬೆಂಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ. SDA, ಸಣ್ಣ ಲಘು ವ್ಯಾಜ್ಯಗಳ ನ್ಯಾಯಾಲಯ, ಬೆಂಗಳೂರು. 9886969631  
11 ಮುನಿರತ್ನ ಪರಿಣಿತರು ಶಿಕ್ಷಕರು, ಸರ್ಕಾರಿ ಅಂಧ ಬಾಲಕರ ಪಾಠಶಾಲೆ, ಮೈಸೂರು 9483440976  
12 ಚನ್ನವೀರ ಸದಸ್ಯರು. ಪ್ರಥಮ ದರ್ಜೆ ಸಹಾಯಕರು, ಚಿತ್ತಾಪುರ ಕೈಗಾರಿಕ ತರಬೇತಿ ಸಂಸ್ಥೆ, ಕಲಬುರಗಿ ಜಿಲ್ಲೆ 9741919252  

 

ಮನವಿ ಸ್ವೀಕಾರ ಮತ್ತು ಕುಂದುಕೊರತೆ ನಿವಾರಣಾ ಸಮಿತಿಯ ಸದಸ್ಯರು:

 

ಕ್ರ.ಸಂ ಹೆಸರು ವಿಭಾಗ ಹುದ್ದೆ ಮತ್ತು ಕಾರ್ಯ ಸ್ಥಳ mobile number ಷರಾ
1 ಕುಪೇಂದ್ರ ಕಾರ್ಯಕಾರಿ ಪದಾಧಿಕಾರಿ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಉಪಲೋನ ತಾಲ್ಲೂಕು, ಕಲಬುರ್ಗಿ ಉತ್ತರ ಜಿಲ್ಲೆ 8494819123  
2 ರವಿ ಪಾಲಯ್ಯ ಗಾದರಿ ಸದಸ್ಯರು ದ್ವಿತೀಯ ದರ್ಜೆ ಸಹಾಯಕರು, ಸಿನೀಯರ್ ಸಿವಿಲ್ ನ್ಯಾಯಾಲಯ (ಸಿಜೆಎಂ) ಬೆಳಗಾವಿ 9008405444 ಸಂಸ್ಥಾಪಕ ಸದಸ್ಯರಾದ ಸಿದ್ದರಾಜು N ರವರಿಂದ ಸೂಚಿಸಲ್ಪಟ್ಟಿರುತ್ತಾರೆ.
3 ಖಂಡ್ಯಪ್ಪ ಕಲ್ಬುರ್ಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಖಜಾನೆ, ಮಿನಿ ವಿಧಾನಸೌಧ, ಕಲಬುರಗಿ 9663642397  
4 ರಘು ಕಲ್ಲುಂಡಿ ಸದಸ್ಯರು ಪ್ರಥಮ ದರ್ಜೆ ಸಹಾಯಕರು, ಸಿನೀಯರ್ ಸಿವಿಲ್ ಜಡ್ಜ್, ಮತ್ತು ಜೆಎಂಎಫ್‍ಸಿ ಕೋರ್ಟ್, ಮುದ್ದೇಬಿಹಾಳ, ವಿಜಯಪುರ. 9591202666  
5 ರೇಣುಕ ಸದಸ್ಯರು ದ್ವಿತೀಯ ದರ್ಜೆ ಸಹಾಯಕರು, ಕಾರಾಗೃಹ ಇಲಾಖೆ, ಕಲಬುರಗಿ ಜಿಲ್ಲೆ 9008566628  
6 ಉಮೇಶ್ N ಸದಸ್ಯರು ಸೈಕ್ರಾಟಿಕ್ ಸೋಷಿಯಲ್ ವರ್ಕರ್, ಜಿಲ್ಲಾ ಆಸ್ಪತ್ರೆ, ಚಿಕ್ಕ ಬಳ್ಳಾಪುರ 9242442969  
7 ಸಂಜೀವ ಶೆಟ್ಟಿ ಸದಸ್ಯರು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾ.ಪಂ ಕಾರ್ಯಾಲಯ, ಅಲೆವೂರು, ರಾಮಪುರ, ಉಡುಪಿ ತಾಲ್ಲೂಕು, ಉಡುಪಿ ಜಿಲ್ಲೆ 9945222254  

 

ಮಹಿಳಾ ಆಧ್ಯತಾ ಸಮಿತಿಯ ಸದಸ್ಯರು:

 

ಕ್ರ.ಸಂ ಹೆಸರು ವಿಭಾಗ ಹುದ್ದೆ ಮತ್ತು ಕಾರ್ಯ ಸ್ಥಳ mobile number ಷರಾ
1 ನಾಗಮಣಿ ಕಾರ್ಯಕಾರಿ ಪದಾಧಿಕಾರಿ ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆ, ಕೂಡ್ಲಾ, ಸೇಡಂ ತಾಲ್ಲೂಕು, ಕಲ್ಬುರ್ಗಿ ಜಿಲ್ಲೆ 8971860715  
2 ನೇತ್ರಾವತಿ ಸಂಸ್ಥಾಪಕ ಸದಸ್ಯರು ಪ್ರಥಮ ದರ್ಜೆ ಸಹಾಯಕರು, ನಗರ ಸಿವಿಲ್ ನ್ಯಾಯಾಲಯಗಳ ಸಮುಚ್ಚಯ ಬೆಂಗಳೂರು. 9242881867  
3 ಚಂಪಕಮಾಲ ಬಳ್ಳಾರಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಥಮ ದರ್ಜೆ ಸಹಾಯಕರು, ಖಜಾನೆ ಇಲಾಖೆ, ಬಳ್ಳಾರಿ ಜಿಲ್ಲೆ. 9449652876  
4 ಚನ್ನಮ್ಮ ಈರಪ್ಪ ಮಾರಿಹಾಳ ಸದಸ್ಯರು ದ್ವಿತೀಯ ದರ್ಜೆ ಸಹಾಯಕರು, ಗ್ರಾ.ಪಂ ಕಾರ್ಯಲಯ, ನಿಚ್ಚಗೆರೆ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ. 9035  
5 ಮುಬಿನ ಬಾನು ಸದಸ್ಯರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ನವಿಲೂರು ಗ್ರಾ.ಪಂ, ಚಾಮರಾಜನಗರ ಜಿಲ್ಲೆ. 990-164-1161  
6 ಅಶ್ವಿನಿ ನರಸು ಮಾಳಿ ಸದಸ್ಯರು ಪ್ರಥಮ ದರ್ಜೆ ಸಹಾಯಕರು, CJMFC ಕೋರ್ಟ್, ರಾಯಬಾಗ, ಬೆಳಗಾವಿ ಜಿಲ್ಲೆ 9019721825  
7 ಮೀನಾಕ್ಷಿ ನುರಿತರು, ಸ್ವಯಂ ಸೇವಕರು copy editor 9241671230

 

 

 

ಪ್ರತಿಭಾನ್ವೇಷಣೆ ಮತ್ತು ಕಾರ‍್ಯಕ್ರಮ ರೂಪುರೇಷೆ ಸಮಿತಿಯ ಸದಸ್ಯರು:

 

ಕ್ರ.ಸಂ ಹೆಸರು ವಿಭಾಗ ಹುದ್ದೆ ಮತ್ತು ಕಾರ್ಯ ಸ್ಥಳ mobile number ಷರಾ
1 ಅಡವೀಶಯ್ಯ ಹೆಚ್.ಎಸ್ ಕಾರ್ಯಕಾರಿ ಪದಾಧಿಕಾರಿ ಶಿಕ್ಷಕರು, ಅಂಧಬಾಲಕರ ಸರಕಾರಿ ಪ್ರೌಢಶಾಲೆ, ಹುಬ್ಬಳ್ಳಿ 988-046-4641  
2 ಯಶವಂತಕುಮಾರ್ ಸಂಸ್ಥಾಪಕ ಸದಸ್ಯರು ಸಂಗೀತ ಶಿಕ್ಷಕರು, ಸರ್ಕಾರಿ ಪ್ರೌಡಶಾಲೆ, ಕಂಪಲಾಪುರ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ 9243983046  
3 ಪ್ರವೀಣ್ ಬಂಡಾರಿ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗೀತ ಶಿಕ್ಷಕರು, ಸರ್ಕಾರಿ ಹಿರಿಯ ಪದವಿ ಪೂರ್ವ ಕಾಲೇಜು (ಪ್ರೌಡಶಾಲಾ ವಿಭಾಗ), ಸೊರಬ, ಶಿವಮೊಗ್ಗ. 8548971164  
4 ಪ್ರಸಾದ್ ಕೆ ಸದಸ್ಯರು ಪ್ರೂಫ್ ರೀಡರ್, ಸರ್ಕಾರಿ ಬ್ರೈಲ್ ಮುದ್ರಣಾಲಯ, ಮೈಸೂರು. 9900318170  
5 ಮಮತಾ ಬಾಯಿ ಸದಸ್ಯರು ದ್ವಿತೀಯ ದರ್ಜೆ ಸಹಾಯಕರು, ಸಹಾಯಕ ನಿರ್ದೇಶಕರು, ಉಪ ಖಜಾನೆ, ಹುಮ್ನಾಬಾದ್, ಬೀದರ್ ಜಿಲ್ಲೆ 734-914-9859  
6 ಚಂದ್ರಶೇಖರ್ T ಸದಸ್ಯರು ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬಳ್ಳಾರಿ ಜಿಲ್ಲೆ. 9482666439  

 

ಸಂಪನ್ಮೂಲ ಆಧಾರಿತ ಯೋಜನಾ ಸಮಿತಿಯ ಸದಸ್ಯರು:

 

ಕ್ರ.ಸಂ ಹೆಸರು ವಿಭಾಗ ಹುದ್ದೆ ಮತ್ತು ಕಾರ್ಯ ಸ್ಥಳ mobile number ಷರಾ
1 ಏಂಜಲಿನೋ ಕೀತ್ ಡಿಸಿಲ್ವ ಕಾರ್ಯಕಾರಿ ಪದಾಧಿಕಾರಿ ದ್ವಿತೀಯ ದರ್ಜೆ ಸಹಾಯಕರು, ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರ ಕಛೇರಿ, ಬೆಂಗಳೂರು. 9481472398  
2 ಶಿವಾಜಿ ಮಾನೆ ಸಂಸ್ಥಾಪಕ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ರಾಜ್ ಇಲಾಖೆ, ಕಡಬಗಟ್ಟಿ, ದಾರವಾಡ. 9964640071  
3 ವಿರೂಪಾಕ್ಷಯ್ಯ ಚಿಕ್ಕಮಗಳೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿ ದ್ವಿತೀಯ ದರ್ಜೆ ಸಹಾಯಕರು, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಕಡೂರು, ಚಿಕ್ಕಮಗಳೂರು ಜಿಲ್ಲೆ 9902083606  
4 ಜಯಲಕ್ಷ್ಮಿ ಸದಸ್ಯರು ದ್ವಿತೀಯ ದರ್ಜೆ ಸಹಾಯಕರು, ಖಜಾನೆ ನಿರ್ದೇಶನಾಲಯ, ವಿಶ್ವೇಶ್ವರಯ್ಯ ಗೋಪುರ, ಬೆಂಗಳೂರು ನಗರ. 9742811056  
5 ಸತೀಶ್ ಕುಮಾರ್ ಜಾಲಿನಗರ್  ಸದಸ್ಯರು ಸಂಗೀತ ಶಿಕ್ಷಕರು, ಸರ್ಕಾರಿ ಜ್ಯೂನಿಯರ್ ಕಾಲೇಜು, ಬಿಳೀಚೂಡು, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ 948-029-6630  
6 ಯತಿರಾಜು N.C ಸದಸ್ಯರು ಪ್ರಾಧ್ಯಾಪಕರು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, 13ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು 7349577356