ಸೂಚನಾ ಫಲಕ

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಪ್ರಕಟಣೆ

“ಸ್ವಾಭಿಮಾನ, ಸ್ವಗೌರವ, ಸಮಾನತೆ” ಎಂಬ ಧ್ಯೇಯವುಳ್ಳ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ನಡೆಸುತ್ತಿರುವ ರಾಜ್ಯ ಮಟ್ಟದ ಮೊದಲನೆ ಕಾರ್ಯಗಾರ ಕುರಿತ ಪ್ರಕಟಣೆ ಇದಾಗಿದೆ. ಸದರಿ ಕಾರ್ಯಗಾರವು ಒಂದು ದಿನದ ಮಟ್ಟಿಗೆ k2 ತಂತ್ರಾಂಶ ವ್ಯವಸ್ಥೆಯ ಕುರಿತಂತೆ.
ಕಾರ್ಯಗಾರ ನಡೆಯುವ ಸ್ಥಳ: ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೇಟಗಳ್ಳಿ ಮೈಸೂರು.
ದಿನಾಂಕ: 25/11/2018 ರವಿವಾರ. ಸಮಯ: ಬೆಳಗ್ಗೆ 10-00.
ಕಾರ್ಯಾಗಾರಕ್ಕೆ ನೋಂದಣಿ

ಸದರಿ ಕಾರ್ಯಗಾರವು ಒಂದು ದಿನದ ಮಟ್ಟಿಗೆ k2 ತಂತ್ರಾಂಶ ವ್ಯವಸ್ಥೆಯ ಕುರಿತಂತೆ ದಿನಾಂಕ ೨೫/೧೧/೨೦೧೮ರ ಭಾನುವಾರದಂದು ನಡೆಯಲಿದ್ದು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಪ್ರಥಮ ದರ್ಜೆ ಸಹಾಯಕರು ಮತ್ತು ಭವಿಷ್ಯದ ದೃಷ್ಟಿಯಿಂದ ಗ್ರೂಪ್ ಡಿ ನೌಕರರಿಗೂ ಉಪಯುಕ್ತವಾಗುವಂತೆಯೇ ರೂಪಿಸಿದ್ದು, ಈ ಕಾರ್ಯಗಾರದ ಪ್ರಯೋಜನವನ್ನು ಎಲ್ಲ ಅಂಧ ನೌಕರರು ಪಡೆದುಕೊಳ್ಳಬೇಕೆಂದು ಸಂಘವು ಕೋರುತ್ತದೆ. ಈ ಕಾರ್ಯಗಾರದಲ್ಲಿ ಶ್ರೀಮತಿ ಗಿರಿಜಾಂಬ ಸಹಾಯಕ ನಿರ್ದೇಶಕರು ಜಿಲ್ಲಾ ಖಜಾನೆ ಮೈಸೂರು, ಇವರು k1-k2 ನಡುವಿನ ವ್ಯತ್ಯಾಸ? k2 ರಿಜಿಸ್ಟ್ರೇಷನ್ ಹೇಗೆ? R1-R2 ಎಂದರೇನು? DSE ಎಂದರೇನು? ಅದನ್ನು ಪಡೆಯುವ ಬಗ್ಗೆ ಹೇಗೆ? Recipient id ಎಂದರೇನು?ಇದರ ವಿಧಗಳು ಹಾಗೂ Recipient id ಯ Registration ಹೇಗೆ? ಎಂಬ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಶಿವಕುಮಾರ್.ಆರ್.ಸಿ ಮತ್ತು ರಘು.ಡಿ.ಎ. ರವರು K2 ಪಬ್ಲಿಕ್ ಪೋರ್ಟಲ್ ನಲ್ಲಿ ಚಲನ್ ಜನರೇಷನ್ ಮಾಡುವುದು ಮತ್ತು ಅಧಿಕೃತ K2 ಬಳಕೆದಾರರು ಡಿಪಾರ್ಟ್ಮೆಂಟ್ ಯುಸೆರ್ ರೊಲ್ ನಲ್ಲಿ ರಿಸೀಟ್ ಜನರೇಷನ್ ಮಾಡುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಡಲಿದ್ದಾರೆ. ಪ್ರಶಾಂತ್ ಎಮ್.ಎನ್ ರವರು ಅಂಗವಿಕಲರ ಹಕ್ಕುಗಳ ಅಧಿನಿಯಮ 2016 ರ ಕುರಿತು ಮಾತನಾಡಲಿದ್ದಾರೆ. ರಾಜ್ಯದ ಎಲ್ಲಾ ನೌಕರ ಮಿತ್ರರು ಈ ಕಾರ್ಯಗಾರದಲ್ಲಿ ಭಾಗವಹಿಸಿ ಕಾರ್ಯಗಾರವನ್ನು ಯಶಸ್ವಿಗೊಳಿಸಬೇಕೆಂದು ಈ ಮೂಲಕ ಸಂಘವು ತಮ್ಮನ್ನು ಕೋರುತ್ತದೆ.

ಕಾರ್ಯಗಾರ ನಡೆಯುವ ಸ್ಥಳ:
ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮೇಟಗಳ್ಳಿ ಮೈಸೂರು.
ದಿನಾಂಕ-೨೫/11/2018 ಭಾನುವಾರ. ಸಮಯ: ಬೆಳಗ್ಗೆ 10-00.
ಬರುವ ವಿಧಾನ: ಮೈಸೂರು ನಗರ ಬಸ್ ನಿಲ್ದಾಣದಿಂದ ಬಸ್ ಕ್ರಮಾಂಕ 133, 303, 307, ಮತ್ತು 116 ಇಳಿಯುವ ಸ್ಥಳ ಮೇಟಗಳ್ಳಿ ಬಸ್ ನಿಲ್ದಾಣ ಅಥವ ಮೇಟಗಳ್ಳಿ ಪೋಲಿಸ್ ಠಾಣೆ.
ವಿಶೇಷ ಸೂಚನೆ:
೧.ಕಾರ್ಯಗಾರದ ಹಿಂದಿನ ದಿನ ಯಾವುದೇ ರೀತಿಯ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದಿಲ್ಲ. ಕಾರ್ಯಗಾರ ನಡೆಯುವ ದಿನದಂದು ಬೆಳಗ್ಗಿನ ಚಹಾ ಮಧ್ಯಾಹ್ನದ ಊಟ ಮತ್ತು ಸಂಜೆಗೆ ಚಹಾವನ್ನು ಮಾತ್ರ ಒದಗಿಸಲಾಗುವುದು.
೨. ಕಾರ್ಯಗಾರಕ್ಕೆ ಆಗಮಿಸುವವರಿಗೆ ಯಾವುದೇ ರೀತಿಯ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ. ಅದಾಗ್ಯೂ ಕಾರ್ಯಗಾರಕ್ಕೆ ಆಗಮಿಸುವವರು ದಿನಾಂಕ 20/11/2018 ರ ಒಳಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ಕಾರ್ಯಾಗಾರಕ್ಕೆ ನೋಂದಣಿ

ಹೆಚ್ಚಿನ ವಿವರಗಳಿಗೆ ಕರೆಮಾಡಬೇಕಾದ ಸಂಖ್ಯೆ:
ಮಜ಼ರ್ ಅಲಿಖಾನ್ -9972931016
ಧನಂಜಯ -9743969405
ಹಾಗು ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ್ ಆರ್.ಸಿ.-9900946451
===
with thanks.
from association