ಸಂಘದ ಸಂರಚನೆ

  1. ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಕಾರ್ಯಕಾರಿ ಸಮಿತಿಯು ಕರ್ನಾಟಕ ರಾಜ್ಯದಲ್ಲಿನ ಎಲ್ಲಾ ವಿಭಾಗಗಳ  ಎಲ್ಲಾ ಜಿಲ್ಲೆಗಳ ಅಧಿಕಾರ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಇದು ಆಡಳಿತ ಮತ್ತು ಲೆಕ್ಕ ಪತ್ರಗಳ ವಿಷಯದಲ್ಲಿ ರಾಜ್ಯದಲ್ಲಿಯ ಜಿಲ್ಲೆ ಹಾಗೂ ವಿಭಾಗಿಯ ಪದಾಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ.
  2. ಕರ್ನಾಟಕ ರಾಜ್ಯದಲ್ಲಿನ ರಾಜ್ಯ ಶಾಖೆಯೊಂದಿಗೆ ಅಗತ್ಯವೆನಿಸಿದಲ್ಲಿ ವಿಭಾಗೀಯ ಶಾಖೆಗಳನ್ನು ಕಾರ್ಯಕಾರಿ ಸಮಿತಿಯ ನಿರ್ಣಯದ ಮೇರೆಗೆ ರಚಿಸಬಹುದಾಗಿದೆ.
  3. ಕಾರ್ಯಕಾರಿ ಸಮಿತಿಯ ಅಧಿಕಾರ ಅವಧಿಯು ಚುನಾವಣೆಯ ನಂತರದ ಪ್ರಥಮ ಸಭೆಯಿಂದ ಜಾರಿಗೆ ಬರುವಂತೆ 3 ವರ್ಷಗಳಾಗಿರುತ್ತದೆ.