ಶ್ರೀಯುತ ಡಾ. ಬಸಯ್ಯಾ ಈರಯ್ಯಾ ಮಠಪತಿ ಅವರ ಸಾಧನೆ 

Sri Erayya Mathapatiಶ್ರೀಯುತ ಡಾ. ಬಸಯ್ಯಾ ಈರಯ್ಯಾ ಮಠಪತಿ ರವರಿಗೆ ಅಭಿನಂದನೆಗಳು

ಶ್ರೀಯುತರಾದ ಡಾ. ಬಸಯ್ಯಾ ಈರಯ್ಯಾ ಮಠಪತಿ ರವರು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾದ ಡಾ. ಈರಣ್ಣಾ ಕೆ. ಪತ್ತಾರ  ಇವರ ಮಾರ್ಗದರ್ಶನದಲ್ಲಿ  “ಕಲ್ಯಾಣದ ಚಾಲುಕ್ಯರ ಕಾಲದ ವ್ಯಾಪಾರ ಮತ್ತು ವಾಣಿಜ್ಯ ವ್ಯವಸ್ಥೆ (ಶಾಸನಗಳ ಆಧಾರದಿಂದ)” ಎಂಬ ವಿಷಯದ ಮೇಲೆ P.H.D ಪ್ರಬಂಧವನ್ನು ಮಂಡಿಸಿರುತ್ತಾರೆ. ಯುಜಿಸಿ ನಿಯಮಗಳು ೨೦೦೯ರ ಪ್ರಕಾರ ಸಿಂಡಿಕೇಟ್ ಸಭೆಯ  ಪರವಾಗಿ ಮಾನ್ಯ ಕುಲಪತಿಗಳು  ಸದರಿಯವರು ಮಂಡಿಸಿದ ಪ್ರಬಂಧಕ್ಕೆ ದಿನಾಂಕ- /೦5/೨೮/೨೦೧೮ ರಂದು ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಘೋಷಿಸಿರುತ್ತಾರೆ.

ಡಾಕ್ಟರೇಟ್ ಪದವಿ ಪಡೆದಿರುವ ಶ್ರೀಯುತ ಬಸಯ್ಯಾ ಈರಯ್ಯಾ ಮಠಪತಿ ಇವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನದಿ-ಇಂಗಳಗಾಂವ ಗ್ರಾಮದವರಾಗಿದ್ದು, ಇವರು ಹುಟ್ಟಿನಿಂದಲೆ ಅಂಧರಾಗಿರುತ್ತಾರೆ. ಸರ್ಕಾರಿ ಅಂಧ ಬಾಲಕರ ಶಾಲೆ ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಮಹೇಶ್ವರಿ ಅಂಧಮಕ್ಕಳ ಶಾಲೆ ಬೆಳಗಾವಿಯಲ್ಲಿ ಮಾಧ್ಯಮಿಕ ಶಿಕ್ಷಣ, ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಇದ್ದುಕೊಂಡು ಪದವಿ ಶಿಕ್ಷಣ ಪೂರೈಸಿ, ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತರ ಪದವಿಯನ್ನು  ಪಡೆದಿದ್ದಾರೆ.

ಇವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಯುತರು ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಸದಸ್ಯರಾಗಿದ್ದು, ನೀತಿನಿರೂಪಣಾ ಸಮಿತಿಯ ಸದಸ್ಯರಾಗಿ ಸಲಹೆಯನ್ನು ನೀಡುತ್ತಿದ್ದಾರೆ.

P.H.D ಅಧ್ಯಯನವನ್ನು ಪೂರೈಸಿ, ಡಾಕ್ಟರೇಟ್ ಪದವಿ ಪಡೆದುಕೊಂಡಿರುವುದು ಸದರಿ ಸಂಘಕ್ಕೆ ಹೆಮ್ಮೆ ತಂದಿದೆ ಎಂದು ಈ ಮೂಲಕ ತಿಳಿಸುತ್ತಾ ಪ್ರತಿಯೊಬ್ಬರೂ ಕೂಡ ಶ್ರೀಯುತರಿಗೆ ಅಭಿನಂದನೆಸಲ್ಲಿಸಬೇಕೆಂದು ಸಂಘವು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದೆ.

MOBILE Number:+919902382953

E-Mail: basayya.im@gmail.com