ವ್ಯಾಪ್ತಿ

ಸಮಗ್ರ ಕರ್ನಾಟಕ ರಾಜ್ಯ ಈ ಸಂಘದ ಅಧಿಕಾರ  ವ್ಯಾಪ್ತಿಯಾಗಿರುತ್ತದೆ ಮತ್ತು  ರಾಜ್ಯ ಪೋಲಿಸ್ ಮತ್ತು ಕಾರಾಗೃಹ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಹಾಗೂ ಕಾನೂನಿನ ಮೂಲಕ ವಿಶೇಷವಾಗಿ ನಿಷೇಧಿಸಲ್ಪಟ್ಟ ಮತ್ತು ಅಖಿಲ ಭಾರತ ಸೇವೆಯಿಂದ ಪಡೆದುಕೊಂಡ ಅಧಿಕಾರಿಗಳನ್ನು ಹೊರತುಪಡಿಸಿ ರಾಜ್ಯ ಸಂಚಿತ ನಿಧಿಯಿಂಧ ಸಂಬಳ ಇತ್ಯಾದಿ ಸಂದಾಯಗಳನ್ನು ಪಡೆಯುತ್ತಿರುವ ಕರ್ನಾಟಕ ಸರ್ಕಾರದಲ್ಲಿ ನಿಯೋಜಿತರಾದ ಎಲ್ಲಾ ಸರ್ಕಾರಿ ನೌಕರರು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಕರ್ನಾಟಕ ಲೋಕಸೇವಾ ಆಯೋಗ ಹಾಗೂ ವಿಧಾನ ಮಂಡಲದ ನೌಕರರು ಸೇರಿದಂತೆ ಹೆಚ್.ಆರ್.ಎಂ.ಎಸ್. ವ್ಯವಸ್ಥೆಗೆ ಒಳಪಡುವ ಮತ್ತು ಬೆಂಚ್‍ಮಾರ್ಕ್ ಡಿಸಬಿಲಿಟಿ ಹೊಂದಿರುವ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರು ಈ ಸಂಘದ ಸದಸ್ಯರಾಗಲು ಅರ್ಹರಾಗಿರುತ್ತಾರೆ.