ರಾಜ್ಯಪರಿಷತ್ತಿನ ಸಭಾ ನಿರ್ಣಯಗಳು

2019ನೇ ಸಾಲಿನ ಪ್ರಥಮ ರಾಜ್ಯ ಪರಿಷತ್‌ ಸಭಾ ನಡವಳಿ

ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ 2019 ನೇ ಸಾಲಿನ ಮೊದಲ ರಾಜ್ಯ ಪರಿಷತ್ನ ಸಭೆಯನ್ನು ಮೈಸೂರಿನ ಹೆಲನ್ ಕೆಲ್ಲರ್ ಅಂಧ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ಾವರಣದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 23/08/2019 ರಂದು ಜರುಗಿದ ೀ ಸಭೆಯಲ್ಲಿ ಬಹುತೇಕ ಪದಾಧಿಕಾರಿಗಳು ಹಲವು ವಿಷಯಗಳ ಮೇಲೆ ಚರ್ಚಿಸಿ ಕೆಳಗಿನ ನಿರ್ಣಯಗಳನ್ನು ಸರ್ವಾನುಮತದಿಂದ ಕೈಗೊಂಡರು. ಈ ಸಭೆಯ ನಡಾವಳಿಗಳ ವಿವರ ಕೆಳಗಿನಂತಿದೆ.
1. ಸಂಘದ ಬಲವರ್ಧನೆ ದೃಷ್ಟಿಯಿಂದ ಕಾರ್ಯಕಾರಿ ಪದಾಧಿಕಾರಿಗಳು ರಾಜ್ಯ ಪರಿಷತ್ನ ಸದಸ್ಯರೊಡನೆ ನಿರಂತರ ಸಂಪರ್ಕದಲ್ಲಿರಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಯಿತು.
2. ಸಂಘಟನೆಯ ಹಿತದೃಷ್ಟಿಯಿಂದ ಪದಾಧಿಕಾರಿಗಳಿಗೆ ಮುಂದಿನ ರಾಜ್ಯ ಪರಿಷತ್ನ ಸಭೆಯಲ್ಲಿ ಸಂಘಟನಾ ಚಾತುರ್ಯ ಹಾಗು ಸೇವಾ ಮನೋಭಾವ ಬಲಗೊಳಿಸಲು ನೆರವಾಗಬಲ್ಲ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
3. ತೆರವಾಗಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ, ಮಹಿಳಾ ನಿರ್ದೇಶಕಿ ಹಾಗು ಕಲ್ಬುರ್ಗಿ ವಿಭಾಗದ ನಿರ್ದೇಶಕ ಸ್ಥಾನಕ್ಕೆ ಕಾರ್ಯಕಾರಿಯಿಂದ ಕ್ರಮವಾಗಿ ನೇಮಕಗೊಂಡ ಬಿ. ಸಿ. ಮಂಜುನಾಥ, ಶ್ರೀಮತಿ ಸಂಧ್ಯಾ ರಾಘವೇಂದ್ರ ಮತ್ತು ಬಸವರಾಜ ಶೂರಶೆಟ್ಟಿಯವರ ನೇಮಕಕ್ಕೆ ಅನೌಪಚಾರಿಕ ಅನುಮೋದನೆ ನೀಡಲಾಯಿತು.
4. ಸಂಘಟನೆಯ ಪುನರ್ರಚಿತ ವಿವಿಧ ಸಮೀತಿಗಳ ಸದಸ್ಯ ಕಾರ್ಯದರ್ಶಿಗಳಿಗೆ ಸಂಘದ ಚಟುವಟಿಕೆಗಳಲ್ಲಿ ತೊಡಗುವಾಗ ನೆರವಾಗಲೆಂದು ಸಾಫ್ಟ್ ಲೆಟರ್ಹೆಡ್ ಪೂರೈಸಲು ನಿರ್ಣಯಿಸಲಾಯಿತು.
5. ನೂತನ ಸದಸ್ಯರ ಗುರುತಿನ ಪತ್ರ ಹಾಗು ರಸೀದಿಗಳನ್ನು ಆಯಾ ಮಾಸಾಂತ್ಯದಲ್ಲಿ ಸಿದ್ಧಗೊಳಿಸಿ ಅಂಚೆಯ ಮೂಲಕ ಸದಸ್ಯರಿಗೆ ತಲುಪಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲು ಸೂಚಿಸಲಾಯಿತು.
6. ಪ್ರಸಕ್ತ ಸಾಲಿನ ಮಹಾ ಸಭೆಯ ನಿರ್ಣಯಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಗದ ಸನ್ನಿವೇಶವನ್ನು ಸಭೆಯ ಗಮನಕ್ಕೆ ತಂದು ಮುಂದಿನ ಮಹಾ ಸಭೆಯಲ್ಲಿ ಕೋರಂ ಸಹಿತ ನಿರ್ಣಯದ ಬಳಿಕ ಸಂಘದ ಸಂವಿಧಾನ ತಿದ್ದುಪಡಿಗೊಳಿಸಲು ನಿರ್ಧರಿಸಲಾಯಿತು.
——-

2ನೇ ರಾಜ್ಯಪರಿಷತ್‌ ಸಭಾ ನಿರ್ಣಯಗಳು

2018 ಸಾಲಿನ ೨ನೇ ರಾಜ್ಯಪರಿಷತ್ತಿನ ಸಭೆಯನ್ನು ಹುಬ್ಬಳ್ಳಿಯ ಸಿದ್ಧಾರೂಢ ಮಠದ ಾವರಣದಲ್ಲಿರುವ ಅಂಧ ಮಕ್ಕಳ ಶಾಲೆಯ ಾವರಣದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 23/12/2018 ರಂದು ಜರುಗಿದ ಸಭೆಯಲ್ಲಿ ಬಹುತೇಕ ಸದಸ್ಯರ ುಪಸ್ಥಿತಿಯಲ್ಲಿ ಈ ಕೆಳಗಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.
1. 2018 ರಲ್ಲಿ ನವೀಕರಣಗೊಳ್ಳಬೇಕಾದ ಸದಸ್ಯರ ನವೀಕರಣದ ದಿನಾಂಕವನ್ನು 31/12/2018 ರವರೆಗೆ ವಿಸ್ತರಿಸಲು ನಿರ್ಣಯಿಸಲಾಯಿತು.
2. ನವೀಕರಣಕ್ಕೆ ನಿರಾಸಕ್ತಿ ತೋರುವ ಸದಸ್ಯರ ಮನವೊಲಿಸಲು ಸಂಘಟನೆಯ ರಾಜ್ಯಪರಿಷತ್ತಿನ ಪದಾಧಿಕಾರಿಗಳು ಪ್ರಯತ್ನಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು.
3. 2018 ರಲ್ಲಿ ಹೊಸ ಸದಸ್ಯತ್ವ ಪಡೆದ ಸದಸ್ಯರಿಗೆ ಸದಸ್ಯತ್ವ ಶುಲ್ಕ ರಸೀದಿ ಹಾಗು ಗುರುತಿನ ಚೀಟಿಗಳನ್ನು ಜನವರಿ-2019 ಅಂತ್ಯದೊಳಗೆ ವಿತರಿಸಲು ತೀರ್ಮಾನಿಸಲಾಯಿತು.
4. 2019 ನೇ ಸಾಲಿನ ವಾರ್ಷಿಕ ಮಹಾ ಸಭೆಯನ್ನು ಗುಲ್ಬರ್ಗ ವಿಭಾಗದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು ಮತ್ತು ಈ ಜವಾಬ್ದಾರಿಯನ್ನು ಕಲ್ಬುರ್ಗಿ ವಿಭಾಗದ ಎಲ್ಲಾ ಸಂಘದ ಪದಾಧಿಕಾರಿಗಳಿಗೆ ವಹಿಸಲಾಯಿತು.
5. ಬಸ್ ಪಾಸ್ ಹಾಗು ಮೂಲ ವೇತನದ ಶೇ ಆರು ಸಂಚಾರಿ ಬತ್ಯೆ ಕುರಿತು ಸಂಘಟನೆ ಸರ್ಕಾರದೊಡನೆ ಪರಿಣಾಮಕಾರಿಯಾಗಿ ಪತ್ರ ವ್ಯವಹಾರ ನಡೆಸಬೇಕೆಂಬ ನಿರ್ಣಯ ತೆಗೆದುಕೊಳ್ಳಲಾಯಿತು.
6. ಕೇಂದ್ರ ಸರ್ಕಾರವು ಜಾರಿಗೊಳಿಸಿದ ಕಟ್ಟಡ ಸಂಹಿತೆಯ ಕುರಿತು ಆಂದೋಲನ ಕೈಗೊಳ್ಳಲು ನಿರ್ಣಯಿಸಲಾಯಿತು.

——-

ರಾಜ್ಯ ಪರಿಷತ್ ಸಭಾ ನಡಾವಳಿ1: ೧೪/೨೦೧೮

ದಿನಾಂಕ: ೧೦/೦೬/೨೦೧೮

ಬೆಂಗಳೂರಿನ ಸಚಿವಾಲಯ ಕ್ಲಬ್ನ ಆವರಣದಲ್ಲಿರುವ ಮುಖ್ಯಮಂತ್ರಿ ಸಭಾಂಗಣದಲ್ಲಿ ೧೦ ಜೂನ್ ೨೦೧೮ ರ ಬೆಳಿಗ್ಗೆ ೧೧ ಗಂಟೆಗೆ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ರಾಜ್ಯಪರಿಷತ್ತಿನ ಸಭೆ ಆರಂಭವಾಯಿತು. ಸಭಾ ನಿರೂಪಣೆಯನ್ನು ಮಂಜುನಾಥ್ ಡುಮ್ಮನವರ್ ವಹಿಸಿಕೊಂಡಿದ್ದು, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ನಾಗಮಣಿ ಹಾಗು ಸಂಸ್ಥಾಪಕ ಸದಸ್ಯರಾದ ಶ್ರೀಮತಿ ನೇತ್ರಾವತಿ ಪ್ರಾರ್ಥನೆಯನ್ನು ಹಾಡುವುದರೊಂದಿಗೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿಗಳಾದ ಕೇಶವಮೂರ್ತಿಯವರು ಸ್ವಾಗತಿಸಿದರೆ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸಮೂರ್ತಿಯವರು ಸಭೆಯ ಪ್ರಾಸ್ತಾವಿಕ ನುಡಿಗಳನ್ನಾಡುವ ಮೂಲಕ ಕೆಳಗಿನ ನಡಾವಳಿಗಳಿಗೆ ಸಭೆಯು ಸಾಕ್ಷಿಯಾಯಿತು.

  • ಸಂಘಟನೆಯ ಚುನಾವಣೆಯ ನಂತರದ ಮೊದಲ ರಾಜ್ಯ ಪರಿಷತ್ ಸಭೆಯಾದ್ದರಿಂದ ಪದಾಧಿಕಾರಿಗಳ ಸಂಕ್ಷಿಪ್ತ ಪರಿಚಯಕ್ಕೆ ಅಧ್ಯಕ್ಷರಿಂದ ಚಾಲನೆ ನೀಡಲಾಯಿತು. ಜೊತೆಗೆ ಸಂಸ್ಥಾಪಕ ಸದಸ್ಯರ ಹಸ್ತದಿಂದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಿಗೆ ಚುನಾವಣಾ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
  • ಉದ್ದೇಶಿತ ಸಂಘಟನೆಯ ಅಂತರ್ಜಾಲ ತಾಣದ ಮಾಹಿತಿಯನ್ನು ಸ್ವಯಂ ಸೇವಕರ ನೆರವಿನಿಂದ ಓದಿಸಿ ರಾಜ್ಯ ಪರಿಷತ್ತಿನ ಪದಾಧಿಕಾರಿಗಳ ಗಮನ ಸೆಳೆಯಲಾಯಿತು. ಜೊತೆಗೆ ಜೂನ್ ಹತ್ತನೇ ದಿನಾಂಕದವರೆಗೆ ಸಂಘಟನೆಗೆ ಸಂದಾಯವಾದ ಹಣಕಾಸಿನ ವಿವರಗಳನ್ನು ಸಭೆಯ ಗಮನಕ್ಕೆ ತರಲಾಯಿತು. ಅಲ್ಲದೇ ಪದಾಧಿಕಾರಿಗಳು ಸದಸ್ಯರಿಂದ ಸಂಗ್ರಹಿಸಿ ತಂದಿದ್ದ ದತ್ತಿ ಹಣವನ್ನು ಖಜಾಂಚಿ ಕೀತ್ ಡಿಸಿಲ್ವಾರ ಸಮ್ಮುಖದಲ್ಲಿ ಸಂಗ್ರಹಿಸಿಕೊಳ್ಳಲಾಯಿತು. ದತ್ತಿ ಸಂಗ್ರಹಕ್ಕೆ ಜೂನ್ ೨೫ ರವರೆಗೆ ದಿನಾಂಕವನ್ನು ಸಭೆ ನಿಗಧಿಪಡಿಸಿತು.
  • ಸಹಕಾರ ಇಲಾಖೆಯ ಸಂಪನ್ಮೂಲ ವ್ಯಕ್ತಿ ಕುಮಾರರವರಿಂದ ಸಹಕಾರ ಸಂಸ್ಥೆಯ ಸ್ಥಾಪನೆಗೆ ಪೂರಕವಾದ ಪ್ರಾಥಮಿಕ ವಿವರಗಳನ್ನು ಹಾಜರಿದ್ದ ಪದಾಧಿಕಾರಿಗಳಿಗೆ ಒದಗಿಸಲಾಯಿತು. ಜೊತೆಗೆ ಮುಂದಿನ ರಾಜ್ಯ ಪರಿಷತ್ ವೇಳೆಗೆ ಪದಾಧಿಕಾರಿಗಳೆಲ್ಲ ಸಹಕಾರ ಸಂಸ್ಥೆಯ ರಚನೆಗೆ ಪೂರಕವಾದ ವಾತಾವರಣವನ್ನು ಉಂಟು ಮಾಡಲು ಅಧ್ಯಕ್ಷರ ಸಲಹೆಯಂತೆ ಸರ್ವಾನುಮತದಿಂದ ನಿರ್ಣಯ ಕೈಗೊಂಡರು.
  • ಸದಸ್ಯತ್ವ ನವೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಸಲಹೆಯನ್ನು ಆಧರಿಸಿ, ಉಪಾಧ್ಯಕ್ಷರಾದ ಕುಪೇಂದ್ರ ಹಾಗು ಸಂಸ್ಥಾಪಕ ಸದಸ್ಯರಾದ ಯಶವಂತರವರ ಮಾರ್ಗದರ್ಶನದಂತೆ ರೂ ೨೦೦ ನವೀಕರಣ ಶುಲ್ಕವನ್ನು ಪಡೆಯಲು ಸರ್ವಾನುಮತದಿಂದ ಸಭೆ ನಿರ್ಣಯ ಕೈಗೊಂಡಿತು.
  • ಸಂಸ್ಥಾಪಕ ಸದಸ್ಯರಾದ ಶಿವಾಜಿ ಮಾನೆ ಹಾಗು ವೀರಖ್ಯಾತಯ್ಯನವರ ಮಾರ್ಗದರ್ಶನದಂತೆ ಪದಾಧಿಕಾರಿಗಳೆಲ್ಲ ಚರ್ಚಿಸಿ ಸಂಘಟನೆಯ ವಿವಿಧ ಆರು ಸ್ಥಾಯಿ ಸಮಿತಿಗಳಿಗೆ ಸಮರ್ಥ ಹಾಗು ಆಸಕ್ತ ಸದಸ್ಯರ ನಾಮಕರಣದ ನಿರ್ಣಯ ಕೈಗೊಂಡರು. ಜೊತೆಗೆ ಕೆಲ ಸಮಿತಿಗಳ ಖಾಲಿ ಸ್ಥಾನಗಳ ಭರ್ತಿಗೆ ಕಾರ್ಯಕಾರಿ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
  • ವಿಭಾಗೀಯ ನಿರ್ದೇಶಕರಾದ ಸರ್ವ ಶ್ರೀ ವೆಂಕಣ್ಣಾ ಕಂಬಾರ್, ರಜಾಕ್ ಟೇಲರ್, ಶಿವಕುಮಾರ್ ಹಾಗು ಶರಣಪ್ಪರವರ ಸಮ್ಮುಖದಲ್ಲಿ ಆಯಾ ವಿಭಾಗದಲ್ಲಿ ನೋಂದಾವಣೆಗೊಂಡ ಹೊಸ ಸದಸ್ಯರ ದಾಖಲೆ ಹಾಗು ಶುಲ್ಕವನ್ನು ಪಡೆದುಕೊಳ್ಳಲಾಯಿತು. ಜೊತೆಗೆ ಹಿಂದೆ ಸದಸ್ಯತ್ವ ಪಡೆದಿದ್ದ ಸದಸ್ಯರಿಗೆ ಮೂಲ ಸದಸ್ಯತ್ವ ರಸೀದಿಯನ್ನು ಜಿಲ್ಲಾ ಸಂಘಟಕರಿಗೆ ವಿತರಿಸಲಾಯಿತು.
  • ಮಹಿಳಾ ನಿರ್ದೇಶಕರಾದ ಆಶಾರವರು ವಂದಿಸುವ ಮೂಲಕ ರಾಜ್ಯ ಪರಿಷತ್ ಸಭೆ ಅಂತ್ಯವಾಗಿದ್ದು ಮುಂದಿನ ಸಭೆಯ ದಿನಾಂಕ ಹಾಗು ಸ್ಥಳವನ್ನು ಕಾರ್ಯಕಾರಿಯ ತೀರ್ಮಾನಕ್ಕೆ ನೀಡಲಾಯಿತು.