ಕ್ಯಾಲೆಂಡರ್

ವಾರ್ಷಿಕ ಚಟುವಟಿಕೆಗಳ ಯೋಜನೆ-೨೦೧೯

ಒಂದು ವ್ಯವಸ್ಥೆಯ ಜೀವಂತಿಕೆಯು ನಿರಂತರ ಕ್ರಿಯಾಶೀಲತೆಯನ್ನು ಅವಲಂಬಿಸಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘವು ವಾರ್ಷಿಕ ಚಟುವಟಿಕೆಗಳನ್ನು ಯೋಜಿಸಿಕೊಂಡಿದೆ. ಸದಸ್ಯರ ಸಂಪರ್ಕ, ಸಮಾಜದಲ್ಲಿ ಜಾಗ್ರುತಿ, ಸಕಾಲಿಕ ತೀರ್ಮಾನಗಳ ಅಗತ್ಯವನ್ನು ಮನಗಂಡು ಸಂಘಟನೆಯನ್ನು ಸಕ್ರಿಯವಾಗಿಡಲು ಸಂಘದ ಚಟುವಟಿಕೆಗಳ ವಾರ್ಷಿಕ ಯೋಜನೆಯನ್ನು ಕೆಳಗಿನಂತೆ ರೂಪಿಸಲಾಗಿದೆ. ಇದು ೨೦೧೯ನೆ ಸಾಲಿನ ಮುನ್ನೋಟವಾಗಿದ್ದು, ಮಾರ್ಪಾಟುಗೊಂಡಲ್ಲಿ ಇಲ್ಲಿ ತಿಳಿಯಪಡಿಸಲಾಗುವುದು.

೧. ಜನವರಿ ತಿಂಗಳ ಮೂರನೇ ಭಾನುವಾರ ರಾಜ್ಯ ಕಾರ್ಯಕಾರಿಯ ಸಭೆ.
೨. ಫೆಬ್ರುವರಿ ಎರಡನೇ ಭಾನುವಾರ ಬೆಳಗಾಂವಿ ವಿಭಾಗದಲ್ಲಿ ಕಾರ್ಯಾಗಾರ.
೩. ಮಾರ್ಚ್ ಮೊದಲ ಭಾನುವಾರ ರಾಜ್ಯ ಕಾರ್ಯಕಾರಿಯ ಸಭೆ.
೪. ಏಪ್ರಿಲ್ ಕೊನೆಯ ಭಾನುವಾರ ಸರ್ವ ಸದಸ್ಯರ ಸಾಮಾನ್ಯ ಸಭೆ.
೫. ಮೇ ಎರಡನೇ ಭಾನುವಾರ ಮೈಸೂರು ವಿಭಾಗದಲ್ಲಿ ಕಾರ್ಯಾಗಾರ.
೬. ಜೂನ್ ಮೂರನೇ ಭಾನುವಾರ ರಾಜ್ಯ ಪರಿಷತ್ತಿನ ಸಭೆ.
೭. ಜುಲೈ ಮೊದಲ ಭಾನುವಾರ ರಾಜ್ಯ ಕಾರ್ಯಕಾರಿಯ ಸಬೆ.
೮. ಆಗಸ್ಟ್ ಮೂರನೇ ಭಾನುವಾರ ಕಲ್ಬುರ್ಗಿ ವಿಭಾಗದಲ್ಲಿ ಕಾರ್ಯಾಗಾರ.
೯. ಸೆಪ್ಟೆಂಬರ್ ಎರಡನೇ ಭಾನುವಾರ ರಾಜ್ಯ ಕಾರ್ಯಕಾರಿಯ ಸಭೆ.
೧೦. ಅಕ್ಟೋಬರ್ ಮೂರನೇ ಭಾನುವಾರ ಬೆಂಗಳೂರು ವಿಭಾಗದಲ್ಲಿ ಕಾರ್ಯಾಗಾರ.
೧೧. ನವೆಂಬರ್ ಮೊದಲ ಭಾನುವಾರ ರಾಜ್ಯ ಪರಿಷತ್ತಿನ ಸಭೆ.
೧೨. ಡಿಸೆಂಬರ್ ಮೂರನೇ ಭಾನುವಾರ ರಾಜ್ಯ ಕಾರ್ಯಕಾರಿಯ ಸಭೆ.