ಕಾರ್ಯಕಾರಿ ಸಮಿತಿಯ ಸಭಾ ನಿರ್ಣಯಗಳು

ಕಾರ್ಯಕಾರಿ ಸಮಿತಿಯ ಮೂರನೆ ಸಭಾ ನಿರ್ಣಯಗಳು

ದಿನಾಂಕ: 26 ಆಗಸ್ಟ್ 2018
ಸಮಯ 4.30PM.
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಕಾರ್ಯಕಾರಿಯ ಸಭೆಯನ್ನು ಬೆಂಗಳೂರಿನ ಸಚಿವಾಲಯ ಕ್ಲಬ್ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕಾರಿ ಸಭೆಗೆ ವಿಶೇಷ ಆಮಂತ್ರಣವನ್ನು ಪಡೆದಿದ್ದ ಸಂಸ್ಥಾಪಕ ಸದಸ್ಯರು ಹಾಜರಾಗಿದ್ದರು. ಈ ಸಭೆಯ ನಡಾವಳಿಗಳನ್ನು ಕೆಳಗಿನ ಅಂಶಗಳಲ್ಲಿ ಗುರುತಿಸಬಹುದಾಗಿದೆ.
1. ಅಂದು ಜಾಲತಾಣ ಲೋಕಾರ್ಪಣೆಯ ಸಮಾರಂಭದ ಕುರಿತು ಸಮಾಲೋಚನೆ ನಡೆಸಲಾಯಿತು.
2. ಸದಸ್ಯತ್ವ ರಸೀದಿ ಹಾಗು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಿಗೆ ಗುರುತಿನ ಚೀಟಿ ಒದಗಿಸಲು ಕ್ರಮವನ್ನು ತ್ವರಿತಗೊಳಿಸಲು ನಿರ್ಧರಿಸಲಾಯಿತು.
3. ಸಹಕಾರಿ ಸಂಸ್ಥೆಯ ಸ್ಥಾಪನೆಗೆ ಚಾಲನೆ ನೀಡಲು ಒಂಬತ್ತು ಸದಸ್ಯರ ತಾತ್ಕಾಲಿಕ ಸಮೀತಿಯನ್ನು ರಚಿಸಲು ನಿರ್ಧರಿಸಲಾಯಿತು. ಸಹಕಾರ ಸಂಸ್ಥೆಯ ಕರಡು ರಚನೆ ಮತ್ತು ವ್ಯಾಪ್ತಿ ನಿರ್ಧಾರದ ಮೂಲಕ ಸಮುದಾಯದ ಹಿತಾಸಕ್ತಿಗೆ ಪೂರಕವಾದ ಸಂಸ್ಥೆಯ ರಚನೆಗೆ ಕ್ರಮ ಕೈಗೊಳ್ಳಲು ಜವಾಬ್ದಾರಿ ನೀಡಲು ನಿರ್ಧರಿಸಲಾಯಿತು.
4. ಅಕ್ಟೋಬರ್ ಮೊದಲ ವಾರದಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾರ್ಯಕಾರಿ ಸಭೆಯನ್ನು ಏರ್ಪಡಿಸಲು ನಿರ್ಣಯಿಸಲಾಯಿತು.
5. ಅಕ್ಟೋಬರ್ ಒಂದನೇ ದಿನಾಂಕದಿಂದ ಸದಸ್ಯತ್ವ ನವೀಕರಣ ಆರಂಭಿಸಲು ಸಮ್ಮತಿಸಲಾಯಿತು.

ಕಾರ್ಯಕಾರಿ ಸಮಿತಿಯ ಎರಡನೆ ಸಭಾ ನಿರ್ಣಯಗಳು

ದಿನಾಂಕ ೧೦/೦೬/೨೦೧೮
ಸಮಯ: 4.30PM.]
ರಾಜ್ಯ ಪರಿಷತ್ತಿನ ಸಭೆಯ ಬಳಿಕ ಕಾರ್ಯಕಾರಿ ಮಂಡಳಿಯ ಸಭೆಯನ್ನು ಸಚಿವಾಲಯ ಕ್ಲಬ್ನ ಮುಖ್ಯಮಂತ್ರಿ ಸಬಾಂಗಣದಲ್ಲೇ ಆಯೋಜಿಸಲಾಗಿತ್ತು. ಮಹಿಳಾ ಉಪಾಧ್ಯಕ್ಷೆ ನಾಗಮಣಿ ಪ್ರಾರ್ಥನೆ ಹಾಡಿದರೆ ಸಹ ಕಾರ್ಯದರ್ಶಿ ಅಡವೀಶಯ್ಯಾ ಸ್ವಾಗತಿಸಿದರು. ಅಧ್ಯಕ್ಷರು ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರು.
ನಿರ್ಣಯಗಳು:
1. ಕಾರಣಾಂತರಗಳಿಂದ ಸಂಘದ ವಾಟ್ಸಾಪ್ ಗುಂಪಿನಿಂದ ಹೊರಗುಳಿದ ಸದಸ್ಯರನ್ನು ಗುಂಪಿಗೆ ಸೇರಿಸಲು ಪದಾಧಿಕಾರಿಗಳು ಸರ್ವಾನುಮತದಿಂದ ನಿರ್ಧರಿಸಿದರು.
2. ರಾಜ್ಯ ಪರಿಷತ್ತಿನಲ್ಲಿ ಜಿಲ್ಲಾ ಸಂಘಟಕರು ಬೇಡಿಕೆಯಿಟ್ಟಂತೆ ಅವರಿಗೆ ಶೀಘ್ರದಲ್ಲಿ ಗುರುತಿನ ಚೀಟಿ ವಿತರಿಸಲು ಮತ್ತು ವಿಭಾಗೀಯ ಮಟ್ಟದ ಲೆಟರ್ ಹೆಡ್ ಒದಗಿಸಲು ತೀರ್ಮಾನಿಸಲಾಯಿತು.
3. ಜುಲೈ ೨೧ ರಂದು ಅಂತರ್ಜಾಲ ತಾಣವನ್ನು ಆರಂಭಿಸಲು ಮತ್ತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿ ಪ್ರಚಾರ ನೀಡಲು ಪ್ರಧಾನ ಕಾರ್ಯದರ್ಶಿಗಳಿಗೆ ಜವಾಬ್ದಾರಿ ನೀಡಲು ನಿರ್ಣಯ ಕೈಗೊಳ್ಳಲಾಯಿತು.
4. ಸೆಪ್ಟೆಂಬರ ತಿಂಗಳಲ್ಲಿ ನೌಕರರ ಮನೋಸ್ಥೈರ್ಯ ಸುಧಾರಣೆಗಾಗಿ ಕಾರ್ಯಾಗಾರವನ್ನು ಆಯೋಜಿಸಲು ತೀರ್ಮಾನಿಸಲಾಯಿತು.
5. ಮುಂದಿನ ಕಾರ್ಯಕಾರಿ ಸಭೆಯನ್ನು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸೇರಲು ಸಮ್ಮತಿಸಲಾಯಿತು.
6. ಸಂಘಟನೆಯ ವಿಷಯಗಳನ್ನು ಕಾರ್ಯಕಾರಿಯ ಪದಾಧಿಕಾರಿಗಳು ನೇರವಾಗಿ ಸದಸ್ಯರಲ್ಲೇ ಹಂಚಿಕೊಳ್ಳಲು ನಿರ್ಧರಿಸಲಾಯಿತು.

ಚುನಾಯಿತ ಕಾರ್ಯಕಾರಿ ಸಮಿತಿಯ ಮೊದಲನೆ ಸಭಾ ನಿರ್ಣಯಗಳು

ದಿನಾಂಕ: 29/04/2018.

ಸ್ಥಳ: ರೇಡಿಯೋ ಆಕ್ಟಿವ್, ಮಹಾವೀರ‍ ಜೈನ್ ವಿಶ್ವವಿದ್ಯಾಲಯದ ಆವರಣ, ಅರಮನೆ ರಸ್ತೆ, ಬೆಂಗಳೂರು.

ಸದರಿ ದಿನಾಂಕದಂದು ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘಟನೆಯ ಪ್ರಥಮ ಚುನಾಯಿತ ಕಾರ್ಯಕಾರಿ ಸಮೀತಿ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳು ಇಂತಿವೆ.

  1. ಸಂಘಟನೆಯ ಚುನಾವಣೆಯಲ್ಲಿ ನಾಮಪತ್ರ ಬಾರದ ಜಿಲ್ಲೆಗಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಆಯಾ ವಿಭಾಗೀಯ ನಿರ್ದೇಶಕರ ಸಲಹೆಯಂತೆ ನಾಮಕರಣಗೊಳಿಸಲು ಸರ್ವಸಮ್ಮತ ನಿರ್ಣಯವನ್ನು ಅಂಗೀಕರಿಸಲಾಯಿತು.
  2. ಸಂಘಟನೆಗೆ ಹೊಸ ಸದಸ್ಯರ ನೋಂದಣಿಗೆ 1/ಮೇ/2018ರಿಂದ 31/ಮೇ/2018 ರವರೆಗೆ ಸಮಯಾವಕಾಶ ನೀಡಲು ತೀರ್ಮಾನಿಸುವುದರೊಂದಿಗೆ, ಸದಸ್ಯತ್ವ ಶುಲ್ಕವನ್ನು 500 ಎಂದು ನಿರ್ಣಯಿಸಲಾಯಿತು.
  3. 10/06/2018 ಜೂನ್ ಎರಡನೇ ಭಾನುವಾರದಂದು ರಾಜ್ಯ ಪರಿಷತ್ತಿನ ಸಭೆಯನ್ನು ಆಯೋಜಿಸಿ ಕಾರ್ಯಭಾರ ನಿರ್ವಹಣೆಗಾಗಿ ವಿವಿಧ ಸಮೀತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.
  4. ಪತ್ತಿನ ಸಹಕಾರ ಸಂಘದ ಸ್ಥಾಪನೆಗೆ ಪೂರಕವಾಗಿ ಪ್ರಾಥಮಿಕ ಮಾಹಿತಿಯನ್ನು ರಾಜ್ಯ ಪರಿಷತ್ತಿನಲ್ಲಿ ಹಂಚಿಕೊಳ್ಳಲು ಉಪಾಧ್ಯಕ್ಷರಾದ ಶ್ರೀಯುತ ಕುಪೇಂದ್ರ, ಚಿಕ್ಕಬಳ್ಳಾಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿರುವ ಶ್ರೀ ಮಂಜುನಾಥ್ B C ಮತ್ತು ಬೆಂಗಳೂರು ವಿಭಾಗೀಯ ನಿರ್ದೇಶಕರಾದ ಶ್ರೀಯುತ ರಜಾಕ್ ಸಾಬ್ ಟೇಲರ್ ರವರುಗಳ ಮೂರು ಸದಸ್ಯರ ಸಮೀತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.
  5. ಸಂಘಟನೆಯ ವ್ಯವಹಾರಗಳ ಸುಗಮ ನಿರ್ವಹಣೆಗಾಗಿ ಅಂತರ್ಜಾಲ ತಾಣವನ್ನು ರಚಿಸಲು ನಿರ್ಣಯಿಸಿ ಅದಕ್ಕೆ ಸಂಪನ್ಮೂಲವನ್ನು ಸಂಘದ ಸದಸ್ಯರ ದೇಣಿಗೆಯಿಂದ, ರಾಜ್ಯ ಪರಿಷತ್ತಿನ ಪದಾಧಿಕಾರಿಗಳ ದೇಣಿಗೆಯಿಂದ ಹಾಗು ಸಾಧ್ಯವಾಗದಿದ್ದಾಗ ಸಂಘಟನೆಯ ಸಂಪನ್ಮೂಲವನ್ನು ಬಳಸಲು ತೀರ್ಮಾನಿಸಲಾಯಿತು.
  6. ಪ್ರತಿ ಮೂರು ತಿಂಗಳಿಗೊಮ್ಮೆ ಕ್ರಮವಾಗಿ ವಿಭಾಗೀಯ ಮಟ್ಟದಲ್ಲಿ ಕಾರ್ಯಾಗಾರ ಹಾಗು ಕಾರ್ಯಕಾರಿ ಮಂಡಳಿಯ ಸಭೆಯನ್ನು ಏರ್ಪಡಿಸಲು ಸರ್ವಸಮ್ಮತವಾಗಿ ನಿರ್ಧರಿಸಲಾಯಿತು.
  7. ಕಛೇರಿಗೆ ಬಹು ಕೌಶಲ್ಯವುಳ್ಳ ಸಿಬ್ಬಂದಿಯನ್ನು ನೇಮಿಸಿಕೊಂಡು ಗೌರವಧನ ರೂ ೩೦೦೦ ನೀಡಲು ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಲಾಯಿತು.