ಅಂಧರ ಸಹಕಾರ ಸಂಘ

ಕರ್ನಾಟಕ ರಾಜ್ಯ ಸಹಕಾರ ಸಂಘದ ಸದಸ್ಯತ್ವ ಅರ್ಜಿ ನಮೂನೆ

ಅಂಧ ನೌಕರರು ಆರ್ಥಿಕ ಸಬಲೀಕರಣಕ್ಕಾಗಿ ಸಂಘಟಿತ ವೇದಿಕೆಯನ್ನು ರೂಪಿಸಿಕೊಳ್ಳಲು ದಿನಾಂಕ: ೧೫/೦೪/೨೦೧೮ರಂದು ಸಂಘದ ಸರ್ವ ಸದಸ್ಯರ ಪ್ರಥಮ ಸಭೆಯಲ್ಲಿ ನಿರ್ಣಯಿಸಿದಂತೆ “ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಹಕಾರ ಸಂಘ ಸ್ಥಾಪನೆಗಾಗಿ ಒಮ್ಮತ ಮೂಡಿತ್ತು. ಇದರಂತೆ ಈಗ ಸಹಕಾರ ಸ್ಥಾಪನೆಗಾಗಿ ಸಹಕಾರ ಇಲಾಖೆಯಿಂದ ಅನುಮತಿ ದೊರೆತಿದ್ದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ, ನಿಗಮ-ಮಂಡಲಿಗಳ ಅನುಧಾನಿತ ಸಂಸ್ಥೆಗಳ ಅಂಧ ನೌಕರರು ಸಹಕಾರ ಸಂಘದ ಸದಸ್ಯರಾಗಬಹುದು. ೧೦೦೦ ಸದಸ್ಯರ ಅವಶ್ಯಕತೆ ಸಹಕಾರ ಸಂಘದ ಸ್ಥಾಪನೆಗೆ ಪೂರಕವಾಗಿರುವುದರಿಂದ, ಷೇರುಗಳನ್ನು ಮೂರು ತಿಂಗಳ ಒಳಗೆ ಖರೀದಿಸುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತರು
karnataka co-operative society membership form ಭರ್ತಿಗೊಳಿಸಿ ಪ್ರವರ್ತಕರನ್ನು ಸಂಪರ್ಕಿಸಬಹುದು.
* ಸದಸ್ಯತ್ವ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:
1. ಅಂಧತ್ವ ಪ್ರಮಾಣಪತ್ರ.
2. ಕಛೇರಿ ಗುರುತಿನ ಚೀಟಿ /ವೇತನ ಪತ್ರ.
3. ಬ್ಯಾಂಕ್‌ ಪಾಸ್‌ ಬುಕ್.‌
4. ಪ್ಯಾನ್‌ ಕಾರ್ಡ್.‌
5. ಆಧಾರ್‌ ಕಾರ್ಡ್.‌
6. ಒಂದು ಶ್ಟಾಂಪ್‌ ಅಳತೆಯ ಹಾಗೂ ಮೂರು ಪಾಸ್ಪೋರ್ಟ್‌ ಅಳತೆಯ ಭಾವಚಿತ್ರಗಳು.
* ಷೇರು ಮೊತ್ತ ಹಾಗೂ ಸದಸ್ಯತ್ವ ಶುಲ್ಕ:
ಒಬ್ಬ ಅಂಧ ನೌಕರ ಕನಿಷ್ಠ ಎರಡೂ ಷೇರುಗಳನ್ನು ಪಡೆದುಕೊಳ್ಳಲೇಬೇಕು. ಒಂದು ಷೇರಿನ ಮೊತ್ತ ರೂ1000 ಹಾಗೂ ಷೇರು ಶುಲ್ಕ ರೂ100 ನಿಗದಿಯಾಗಿದೆ.
ಸದಸ್ಯತ್ವ ಪ್ರವೇಶ ಶುಲ್ಕ ರೂ 200. ಒಮ್ಮೆ ಮಾತ್ರ ಇದನ್ನು ನೀಡಬೇಕು.
* ಪ್ರವರ್ತಕರ ಮೊಬೈಲ್‌ ಸಂಖ್ಯೆಗಳು:
ಒಟ್ಟು ಹತ್ತೊಂಭತ್ತು ಪ್ರವರ್ತಕರು ಸದರಿ ಸಹಕಾರ ಸಂಘದಲ್ಲಿದ್ದು, ಈ ಕುರಿತು ಮಾಹಿತಿ ಬೇಕಾಗಿದ್ದಲ್ಲಿ, ನೀವು ಪ್ರವರ್ತಕರಲ್ಲೊಬ್ಬರಿಗೆ ಪಠ್ಯ ಸಂದೇಶ ಕಳುಹಿಸಬಹುದಾಗಿದೆ.
ಯಷವಂತ್ಕುಮಾರ್‌ ಹೆಚ್.ವಿ ರವರಿಗೆ ಪಠ್ಯ ಸಂದೇಶ ಕಳುಹಿಸಿ.
ಮಂಜುನಾಥ್‌ ಬಿ.ಸಿ ರವರಿಗೆ ಪಠ್ಯ ಸಂದೇಶ ಕಳುಹಿಸಿ.
ಶಿವಾಜಿ ಮಾನೆ ರವರಿಗೆ ಪಠ್ಯ ಸಂದೇಶ ಕಳುಹಿಸಿ.
ಖಂಡೆಪ್ಪ ರವರಿಗೆ ಪಠ್ಯ ಸಂದೇಶ ಕಳುಹಿಸಿ.