ಮುಖಪುಟ

ಸಭಾ ಸೂಚನಾ ಪತ್ರ:
ಕರ್ನಾಟಕ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘದ ಎರಡನೇ ವಾರ್ಷಿಕ ಮಹಾಸಭೆ

ಮಾನ್ಯ ಸದಸ್ಯರೇ,
ಈ ಪತ್ರದ ಮೂಲಕ ತಮ್ಮೆಲ್ಲರಿಗೂ ತಿಳಿಯಪಡಿಸುತ್ತಿರುವುದೇನೆಂದರೆ,
ಕಾರ್ಯಕಾರಿ ಸಮಿತಿಯು ಸಂಘದ ಅಧ್ಯಕ್ಷರಾದ ಶ್ರೀಯುತ ರಮೇಶ್ ಸಂಕ ರೆಡ್ಡಿಯವರ ಅಧ್ಯಕ್ಷತೆಯಲ್ಲಿ
ದಿನಾಂಕ: 12/05/2019ರಂದು
ಬೆಳಗ್ಗೆ 10 ಘಂಟೆಗೆ ಕಲ್ಬುರ್ಗಿ ನಗರದಲ್ಲಿರುವ ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ ಆವರಣದಲ್ಲಿ ಸಂಘದ ಎರಡನೆ ವರ್ಷದ ಮಹಾಸಭೆಯನ್ನು ಆಯೋಜಿಸಲು ನಿರ್ಣಯಿಸಿರುತ್ತದೆ.
ಸಂಘದ ಸದಸ್ಯರೆಲ್ಲರು ತಪ್ಪದೆ ಮಹಾಸಭೆಗೆ ಹಾಜರಾಗುವುದರೊಂದಿಗೆ, ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಕೈಗೊಳ್ಳುವ ನಿರ್ಣಯಗಳನ್ನು ಅನುಮೋಧಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಗೆ
ಸಂಘದ ಎರಡನೆ ಮಹಾ ಸಭಾ ಪತ್ರ
ಓದಿರಿ, ಓದಿದ ಬಳಿಕ ಪರಿಚಯವಿರುವ ಸಹ ಸದಸ್ಯರಿಗೆ ತಿಳಿಸಿರಿ.